BLOCKING TRANSFER IS CORRUPTION: ಪೊಲೀಸ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ತಡೆ ಹಿಡಿದು, ಭಂಡತನ ತೋರ್ತಿದೆ ಸರ್ಕಾರ: ಅಶ್ವಥನಾರಾಯಣ

ಬೆಂಗಳೂರು : ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಇರೋದೇ ಸಿಎಂ, ಸಚಿವರು ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು, ಒದ್ಸಲ ಈ ಬೋರ್ಡ್ ನಲ್ಲಿ ನಿರ್ಧರಿಸಿ ವರ್ಗಾವಣೆ ಮಾಡಿದ್ರೆ ತಡೆ ಹಿಡಿಯಲು ಅವಕಾಶ ಇಲ್ಲ, ಆದರೆ ಈ ಸರ್ಕಾರ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ನಲ್ಲಿ ಕಾನೂನು ಮೀರಿ ಹಸ್ತಕ್ಷೇಪ ಮಾಡಿದೆ, ಆಗಿರುವ ವರ್ಗಾವಣೆಗಳನ್ನು ತಡೆ ಹಿಡಿದಿದೆ, ಇದು ಕಾನೂನು ಉಲ್ಲಂಘನೆ ಎಂದು ಬಿಜೆಪಿ ಶಾಸಕ ಸಿ.ಎನ್.ಅಶ್ಚಥ್ ನಾರಾಯಣ ಹೇಳಿದ್ದಾರೆ.


ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ತಡೆ ಹಿಡಿದು, ಭಂಡತನ ತೋರ್ತಿದೆ, ಸರ್ಕಾರದಿಂದಲೇ ಕಾನೂನು ಉಲ್ಲಂಘನೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ರಾಜ್ಯ ಸರ್ಕಾರದಲ್ಲಿ ತುಂಬಿ ತುಳುಕುತ್ತಿದೆ, ಜನರಿಗೆ ಭಾಗ್ಯ ಕೊಟ್ಟು ಇರೋ ಭಾಗ್ಯಗಳನ್ನೆಲ್ಲ ಸಿಎಂ, ಸಚಿವರು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕೇವಲ ವೈಎಸ್‌ಟಿ, ಎಸ್‌ಎಸ್‌ಟಿ ಅಂತ ಅಲ್ಲ, ಎಲ್ಲರೂ ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಪ್ರತ್ಯೇಕವಾಗಿ ಒಬ್ಬ ವ್ಯಕ್ತಿ ಅಂತ ಅಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.


ಜೆಡಿಎಸ್ ಜತೆ ದೋಸ್ತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ, ಈ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ವಿರುದ್ಧ ಪ್ರತಿಪಕ್ಷಗಳಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವೂ ಧ್ವನಿ ಎತ್ತಿದ್ದೇವೆ, ಜೆಡಿಎಸ್‌ನವ್ರೂ ಧ್ವನಿ ಎತ್ತಿದ್ದಾರೆ, ಈ ಸರ್ಕಾರಕ್ಕೆ ಅಂಕುಶ ಹಾಕುವ ಕೆಲಸ ಮಾಡುತ್ತಿದ್ದೇವೆ, ನಾವು ಜೆಡಿಎಸ್ ಜತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ಜತೆಯಲ್ಲಿಯೇ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ ಎಂದರು.

More News