Give Modi The False Oscar: ಬಿಜೆಪಿ ಏನೇ ಮಾಡಿದರೂ ಮನೆಗೆ ಹೋಗುವುದು ಖಂಡಿತ: ಸುಳ್ಳಿನ ಆಸ್ಕರ್ ಮೋದಿಗೆ ನೀಡಿ..!

ಹುಬ್ಬಳ್ಳಿ: ಬಿಜೆಪಿ ಸರ್ಕಾರ ಎನೇ ಮಾಡಿದರೂ ಈ ಬಾರಿ ಎನ್‌ಡಿಎ ಪಕ್ಷ ಮನೆಗೆ ಹೋಗುತ್ತದೆ. ಇಂಡಿಯಾ ಪಕ್ಷ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಸ್ವಾಗತ ಮಾಡುತ್ತೆವೆ. ಬಿಜೆಪಿಗೆ ದೊಡ್ಡ ಮುಖಭಂಗ ಆಗಿದೆ. ಇದು ಸಂವಿಧಾನಕ್ಕೆ ಜಯವಾಗಿದೆ. ಕಾನೂನಿನ ಮೇಲೆ ನಮಗೆ ವಿಶ್ವಾಸ ಇತ್ತು, ನಮಗೆ ಇವತ್ತು ಜಯ ಸಿಕ್ಕಿದೆ. ರಾಹುಲ್ ಗಾಂಧಿಗೆ ಜನಪ್ರಿಯತೆ ಹೆಚ್ಚಿಗೆ ಆಗ್ತಾ ಇತ್ತು, ಆದ್ದರಿಂದ ಬಿಜೆಪಿ ಇಂತಹ ಷಡ್ಯಂತ್ರ ಮಾಡಿದೆ ಎಂದರು.

ದೆಹಲಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಲೋಕಸಭಾ ರಣತಂತ್ರದ ಬಗ್ಗೆ ಚರ್ಚೆ ಆಗಿದೆ.‌ಕಾಂಗ್ರೆಸ್ ಹೈಕಮಾಂಡ ನಮಗೆ ಟಾರ್ಗೆಟ್ ನೀಡದೆ. ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಗೆಲ್ಲಬೇಕೆಂದು ನೀಡಿದೆ. ನಾವು 20 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುತ್ತೆವೆ.‌ ಬಿಜೆಪಿ 9 ವರ್ಷಗಳ ಸುಳ್ಳು ಹೇಳ್ತಾ ಬಂದಿದೆ. ಆ ಸುಳ್ಳು ಜನರಿಗೆ ಮನವರಿಕೆ ಮಾಡುವ ಕೆಲಸವನ್ನ ಮಾಡುತ್ತೆವೆ.‌ಯುವಕರಿಗೆ ಇಂದ್ರ ಚಂದ್ರ ತೋರಿಸಿದೆ, ಬಿಜೆಪಿ ಪ್ರಣಾಳಿಕೆ ಪ್ರಕಾರ 18 ಕೋಟಿ ಯುವಕರಿಗೆ ಉದ್ಯೋಗ ಸೀಗಬೇಕಿತ್ತು. 18 ಲಕ್ಷ ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ನಮ್ಮ‌ ಪಕ್ಷ ರಾಜ್ಯದಲ್ಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕಿದೆ. ಸುಳ್ಳಿಗೆ ಆಸ್ಕರ್ ಅವಾರ್ಡ್ ಕೊಡುವುದಾದರೇ ನರೇಂದ್ರ ಮೋದಿಯವರಿಗೆ ಕೊಡಬೇಕು ಎಂದು ಅವರು ಹೇಳಿದರು.

ಯುವನಿಧಿಯನ್ನು ಡಿಸೆಂಬರ್‌ನಲ್ಲಿ ಕಾರ್ಯರೂಪಕ್ಕೆ ತರುತ್ತೆವೆ. ರಾಷ್ಟ್ರೀಯ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನನ್ನ ಮಾಡಲು ಆಗಿಲ್ಲ. ಸದನದ ಸಮಯವನ್ನು ಹಾಳು ಮಾಡುವಂತ ಕೆಲಸ ಮಾಡಿದ್ದಾರೆ. ಜನರಿಗೆ ದಾರಿ ತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗುತ್ತಾರೆ. ಬಿಜೆಪಿ ಏನೇ ಮಾಡಿದ್ರು ಇಂಡಿಯಾ ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಸಿದ್ದಾಂತಗಳ ಮೇಲೆ ಟಿಕೆಟ್ ಹಂಚಿಕೆ ಮಾಡುತ್ತೆವೆ.‌ ಈಗಾಗಲೇ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಓರ್ವ ಸಚಿವ ಮತ್ತು ಹಿರಿಯರನ್ನ ನೇಮಕ ಮಾಡಲಾಗುತ್ತದೆ.‌ ಅವರ ಮುಖಾಂತರ ವರದಿ ತರಿಸಿಕೊಂಡು ಟಿಕೆಟ್ ನೀಡಲಾಗುತ್ತದೆ. ಪಕ್ಷ ತೀರ್ಮಾನ ಮಾಡಿದ್ರೆ ನಾನೂ ಹಾವೇರಿಯಿಂದ ಸ್ಪರ್ಧೆ ಮಾಡುವೆ‌. ಐದು ತಿಂಗಳ ಮುಂಚೆಯೇ ಅಭ್ಯರ್ಥಿಗಳ ಘೋಷಣೆ ಮಾಡುತ್ತೆವೆ. ಹೆಚ್ಚಿನದಾಗಿ ಯುವಕರಿಗೆ ಮತ್ತು ಮಹಿಳೆಯರಿಗೆ ಟಿಕೆಟ್ ನೀಡಲಾಗುತ್ತದೆ.‌ನಿಗಮ‌ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಆರಂಭ ಆಗಿದೆ. ಜಿಲ್ಲಾವಾರು ಮಾಹಿತಿ ತರಿಸಿಕೊಂಡು ನೇಮಕ ಮಾಡಲಾಗುತ್ತದೆ ಎಂದ ಅವರು, ಜಗದೀಶ್ ಶೆಟ್ಟರ್ ಪಕ್ಷಕ್ಕೆ ಬಂದಿದ್ದರಿಂದ ನಮಗೆ ಶಕ್ತಿ ಬಂದಿದೆ ಎಂದರು.

ಉಡುಪಿ ಗಲಾಟೆ ಬಗ್ಗೆ ತನಿಖೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಹುಬ್ಬಳ್ಳಿಯಲ್ಲೂ ಅಂತಹ ಘಟನೆ ನಡೆದಿದೆ, ಸೂಕ್ತ ತನಿಖೆ ನಡೆಸಬೇಕೆಂದು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ.‌ಸದನದಲ್ಲಿ ಅವರಿಗೆ ಅವಕಾಶ ಇತ್ತು, ಏಕೆ ದಾಖಲೆ ಬಿಡುಗಡೆ ಮಾಡಲಿಲ್ಲ. ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡಿದ್ದಾರೆ.‌ ಬಿಜೆಪಿಗೆ ನಾಯಕತ್ವದ ಕೊರತೆ ಇದೆ. ವಿಧಾನ ಪರಿಷತ್ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನನ್ನ ಮಾಡಲು ಆಗಿಲ್ಲ‌ ಎಂದು ಸಲೀಂ ಅಹ್ಮದ್ ಹೇಳಿದರು.

More News