ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ನಡೆದಿದ್ದು, ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ನಮ್ಮ ಮೆಟ್ರೋ, ಫೇಸ್ -2 ಕಾಮಗಾರಿ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸಿಬ್ಬಂದಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕಾಮಗಾರಿ ವೇಳೆ ಕೆಳಗೆ ಬೀಳುವ ಸ್ಥಿತಿ ತಲುಪಿದ ಬಹು ದೊಡ್ಡ ಸೆಗ್ಮಂಟ್ ಜೋಡಿಸುವ ಮಿಷನ್. ಸುಮಾರು ನಲವತ್ತು ಅಡಿ ಎತ್ತರದಿಂದ ಕೆಳಗೆ ಬೀಳುವ ಹಂತಕ್ಕೆ ಕ್ರೇನ್ ವಾಲಿತ್ತು.

ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಸಂದರ್ಭದಲ್ಲಿ ಯಂತ್ರ ಅರ್ಧಕ್ಕೆ ತುಂಡಾಗಿ ಈ ಅವಘಢ ಸಂಭವಿಸಿದೆ, ಸಿಲ್ಕ್ ಬೋರ್ಡ್ ಬಳಿ ಬೆಳಗ್ಗೆ ಸುಮಾರು 6:30ರ ವೇಳೆ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಕಾರ್ಮಿಕರು ಇಲ್ಲದೆ ಇದ್ದುದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಹಾಗೆಯೇ ಪಕ್ಕದಲ್ಲೇ ಮುಖ್ಯರಸ್ತೆಯಲ್ಲಿ ಹೆಚ್ಚಿನ ಸಂಚಾರವಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತ, ಪ್ರಾಣಾಪಾಯ ಸಂಭವಿಸಿಲ್ಲ. ಸಿಲ್ಕ್ ಬೋರ್ಡ್ ಟು ಕೆ ಆರ್ ಪುರಂ ಮಾರ್ಗವಾಗಿ ಮಟ್ರೊ ಕಾಮಗಾರಿ ನಡೆಯುತ್ತಿದೆ. ಆಯತಪ್ಪಿ ಕೆಳಗೆ ಬೀಳುವ ಹಂತದಲ್ಲಿರುವ ಯಂತ್ರವನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ.
ಸ್ಥಳದಲ್ಲಿ ಇಂಜಿನಿಯರ್ ಗಳು ಮೊಕ್ಕಾಂ ಹೂಡಿದ್ದು, ಹೇಗೆ ಯಂತ್ರವನ್ನು ಎತ್ತಬೇಕು ಎನ್ನುವುದರ ಕುರಿತು ಯೋಜನೆ ರೂಪಿಸುತ್ತಿದ್ದಾರೆ. ಆದರೆ, ಸ್ಥಳಕ್ಕೆ ಮಾತ್ರ ಯಾವೊಬ್ಬ ಮೆಟ್ರೋ ಅಧಿಕಾರಿಗಳು ಬಂದಿರಲಿಲ್ಲ. ಘಟನೆ ನಡೆದು ಆರು ಗಂಟೆ ಕಳೆದಿದ್ದೂ ಸ್ಥಳದಲ್ಲಿ ಮಾತ್ರ ಅಧಿಕಾರಿಗಳು ಯಾರೂ ಇರಲಿಲ್ಲ.




