ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಮಾಹಿತಿ ಕಲೆ ಹಾಕಲು ಮುಂದಾದ ಡಿಕೆ ಶಿವಕುಮಾರ್ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ಪತ್ರ ಬರೆದು ಕಾಮಗಾರಿಯ ದಾಖಲೆ ನೀಡಿಲು ತಿಳಿಸಿದ್ದಾರೆ.
ಕಾಮಗಾರಿಗಳ ಪಿನ್ ಟು ಪಿನ್ ಮಾಹಿತಿ ಕಲೆ ಹಾಕಲು ಡಿಕೆಶಿ ಸಜ್ಜು


ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಹಿಡಿದು ಮುಂದೋಗಲು ಕೈ ಪಡೆ ಸಜ್ಜಾಗಿದೆ. ಹೀಗಾಗಿ 2019 ರಿಂದ 2023ರ ಅವಧಿಯಲ್ಲಿ ನಡೆದಿರೋ ಕಾಮಗಾರಿಗಳು ಮತ್ತು ಬಸವರಾಜ್ ಬೊಮ್ಮಾಯಿ ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಕೈಗೊಂಡಿರುವ ಕಾಮಾಗಾರಿಗಳ ವರದಿಯನ್ನ ಬಿಜೆಪಿ ಅವಧಿಯಲ್ಲಿ ಪಾಲಿಕೆ ಆಯುಕ್ತರಾಗಿದ್ದ ಗೌರವ್ ಗುಪ್ತಾ, ಹಣಕಾಸು ಕಮಿಷನರ್ ಆಗಿದ್ದ ತುಳಸಿ ಮದ್ದಿನೇನಿಗೆ ಸಂಪೂರ್ಣ ಕಾಮಗಾರಿ ಮಾಹಿತಿ ಹಾಗೂ ಅಧಿಕಾರಿಗಳ ವಿವರ ನೀಡಬೇಕೆಂದು ತಿಳಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಜೊತೆಗೆ 2019-23 ಅವಧಿಯಲ್ಲಿ ಅನುಮೋದಿತ, ಅನುಷ್ಠಾನಗೊಂಡ ಹಾಗೂ ಟೆಂಡರ್‌ಗಳ ಪ್ರತಿಯೊಂದರ ಮಾಹಿತಿ ಕೇಳಿದ್ದು, ಪ್ರತಿ ಕಾಮಗಾರಿಯ 15 ಅಂಶಗಳನ್ನು ಒಳಗೊಂಡ ಪ್ರಶ್ನೆಗೆ ಉತ್ತರ ಸಹಿತ ಮಾಹಿತಿಕೊಡುವಂತೆ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.




