Formation of Separate SIT Committee: BBMP ಅಧಿಕಾರಿಗಳಿಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಬಿಜೆಪಿ ಅವಧಿಯ ಕಾಮಗಾರಿ ತನಿಖೆಗೆ ಪ್ರತ್ಯೇಕ SIT ಸಮಿತಿ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಮತ್ತೊಂದು ಮಾಸ್ಟರ್ ಸ್ಟ್ರೋಕ್ ಕೊಟ್ಟ ಸರ್ಕಾರ 2019 – 23ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆ ನಡೆಸಲು ಪ್ರತ್ಯೇಕ SIT ಸಮಿತಿ ರಚನೆ ಮಾಡಿದೆ.

ಲೋಕ ಗೆಲ್ಲಲು ಸಜ್ಜಾದ ಕಾಂಗ್ರೆಸ್, ಬಿಜೆಪಿ‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬೆನ್ನತ್ತಿದೆ. ಬಿಜೆಪಿ ಅವಧಿಯಲ್ಲಿ ನಡೆದ ಕಾಮಗಾರಿಗಳ ತನಿಖೆ ಬೆನ್ನಲ್ಲೇ ಬಿಬಿಎಂಪಿ ಹಂತದಲ್ಲೂ ಕಾಮಗಾರಿ ತನಿಖೆಗೆ ನಾಲ್ಕು ವಿಭಾಗಗಳಲ್ಲಿ ತನಿಖೆ ನಡೆಸಲು ನಾಲ್ಕು ವಿಶೇಷ ಸಮಿತಿ ರಚಿಸಿ ಆದೇಶ ಹೊರಡಿಸಿದೆ.

ಉಜ್ವಲ್ ಕುಮಾರ್ ಘೋಷ್ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿ

ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ತನಿಖಾ ಸಮಿತಿಯಲ್ಲಿ ಅಧ್ಯಕ್ಷ ರಾಗಿ ಉಜ್ವಲ್ ಕುಮಾರ್ ಘೋಷ್, ಸದಸ್ಯರಾಗಿ, ದೊಡ್ಡಿಹಾಳ್, PWD ಚೀಫ್ ಇಂಜಿನಿಯರ್, ಬಸವರಾಜ ಕೋಟೆ, PWD ಚೀಫ್ ಇಂಜಿನಿಯರ್, ಹಾಗೂ ಕೆಪಿಟಿಸಿಎಲ್ AEE ಪ್ರಭಾಕರ್ ಆಯ್ಕೆ ಮಾಡಲಾಗಿದೆ.

ಆಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ರಸ್ತೆ ಅಭಿವೃದ್ಧಿ, ಓಏಫ್‌ಸಿ ಕೇಬಲ್ ಕಾಮಗಾರಿ ತನಿಖಾ ಸಮಿತಿ

ರಸ್ತೆ ಅಭಿವೃದ್ಧಿ, ಓಏಫ್‌ಸಿ ಕೇಬಲ್ ಕಾಮಗಾರಿ ತನಿಖಾ ಸಮಿತಿಯನ್ನ ರಚಿಸಿದ್ದು,‌ ಆಮ್ಲಾನ್ ಆದಿತ್ಯ ಬಿಸ್ವಾಸ್ ರನ್ನ ಅಧ್ಯಕ್ಷರನ್ನಾಗಿ,‌ PWD ಚೀಫ್ ಇಂಜಿನಿಯರ್ ಪ್ರಭಾಕರ್ ಡಿ ಹೆಮ್ಮಿಗೆರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಸದಸ್ಯರಾಗಿ, ಜ್ವಾಲೇಂದ್ರ ಕುಮಾರ್,‌ PWD ಚೀಫ್ ಇಂಜಿನಿಯರ್ ಆಗಿ ಕೆ ಮೋಹನ್, PWD EE ,
ಯ ಬಸವರಾಜ್ ಶಂಶಿಮಠ್, ಎನ್ ಎಸ್ ಮೋಹನ್ – PWD EE ಯಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಪಿಸಿ ಜಾಫರ್ ರನ್ನ ಅಧ್ಯಕ್ಷತೆಯಲ್ಲಿ ನೀರುಗಾಲುವೆ, ನಗರ ಯೋಜನೆ, ಸ್ವಾಧೀನಭೂಪತ್ರಕ್ಕೂ ತನಿಖಾ ಸಮಿತಿ

ನೀರುಗಾಲುವೆ, ನಗರ ಯೋಜನೆ, ಸ್ವಾಧೀನಭೂಪತ್ರಕ್ಕೂ ತನಿಖಾ ಸಮಿತಿ ರಚಿಸಿ, ಪಿಸಿ ಜಾಫರ್ ರನ್ನ ಅಧ್ಯಕ್ಷ
ರನ್ನಾಗಿ ಮಾಡಲಾಗಿದೆ. ಇವರೊಂದಿಗೆ ಸದಸ್ಯರಾಗಿ,
EICR ಕಾರ್ಯದರ್ಶಿ ಎಸ್ ಬಿ ಸಿದ್ಧಗಂಗಪ್ಪ, PWD ಚೀಫ್ ಇಂಜಿನಿಯರ್ ಹೆಚ್ ಆರ್ ರಾಮಕೃಷ್ಣ, PWD EE ಯಾದ‌ಮಲ್ಲೇಶ್ ಆಯ್ಕೆಯಾಗಿದ್ದಾರೆ.

ಡಾ. ವಿಶಾಲ್ ಆರ್ ಅಧ್ಯಕ್ಷತೆಯಲ್ಲಿ ಕೆರೆ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಕಾಮಗಾರಿ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಸದಸ್ಯರಾಗಿ, PWD ಚೀಫ್ ಇಂಜಿನಿಯರ್ ಬೀಸೇಗೌಡ, EE PWD ಹೆಚ್ ಪಿ ಪ್ರಕಾಶ್,
PWD EE ಯ ಶ್ರೀಕಾಂತ್, PWD EE ಯ ಹೆಚ್ ಕುಮಾರ್, PWD ಇಂಜಿನಿಯರ್ ಜಿಎಸ್ ಗೋಪಿನಾಥ್,
ರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

“ಕಾಮಗಾರಿ ಮೊದಲೇ ಹಣ ಬಿಡುಗಡೆ ಆಗಿದೆ”

ತನಿಖಾ ಸಮಿತಿ ರಚನೆ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಹಾಗೂ ಬಿಜೆಪಿ ಅವಧಿಯಲ್ಲಿ ಕಾಮಗಾರಿಯದ್ದು ಬಾಕಿ ಇದೆ. ಕಾಮಗಾರಿ ಮೊದಲೇ ಹಣ ಬಿಡುಗಡೆ ಆಗಿದೆ. ಒಂದು ಕೋಟಿ 99 ಲಕ್ಷ ಬಿಲ್ ಪೆಂಡಿಂಗ್ ಇಟ್ಟಿದ್ದಾರೆ. ಕಾಮಗಾರಿ ನಡೆದಿರೋದು ಸತ್ಯ. ಪ್ರತೀ ವಾರ್ಡಲ್ಲಿ ಕಾಮಗಾರಿ ನಡೆದಿದೆ. ಅದರಂತೆ ತನಿಖೆ ನಡೆಯಲಿದೆ. SIT ನಾವು ಮಾಡಿಲ್ಲ. ಕೆಲವು ಕೆಲಸ ಮಾಡಿದ್ದಾರೆ. ಮಾಡಿದ್ದಾರಾ ಇಲ್ವಾ, ಯಾವಾಗ ಮಾಡಿದ್ದಾರೆ.? ಕಾಮಗಾರಿ ಆಗಿದೆಯಾ, ಕೆಲಸ ಆಗಿದೆಯಾ, ಕ್ವಾಲಿಟಿ ಇದೆಯಾ.? ಬಿಲ್ ಯಾವಾಗ ಬರೆದ್ರು, ಎಷ್ಟಕ್ಕೆ ಬರೆದ್ರು ಅನ್ನೋದು ನೋಡಬೇಕು. ಎಂದರು.

More News