ಬೆಂಗಳೂರು : ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಲ್ಲ. ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ನನಗೂ ಪ್ರಜ್ಞೆ ಇದೆ, ನನಗೂ ರಾಜಕಾರಣ ಗೊತ್ತಿದೆ. ಯಾವ ಕಾಂಟ್ರಾಕ್ಟರ್ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ. ಯಾವ ಬ್ಲಾಕ್ ಮೇಲ್ ನನ್ನ ಮುಂದೆ ನಡೆಯಲ್ಲ ಎಂದು ಖಡಕ್ ಆಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಬಿಎಂಪಿ ಗುತ್ತಿಗೆದಾರರ ಸಂಘಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಇಂದು ತುರ್ತು ಬೆಂಗಳೂರು ನಗರ ಶಾಸಕರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಾವು ವಿಪಕ್ಷ ಇದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರ್ತಿರಲಿಲ್ವಾ.? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ. ಒಂದೇ ವಾರದಲ್ಲಿ ಹಣ ಬಿಡುಗಡೆ ಆಗುತ್ತಾ.? ಯಾವ ಪ್ರಜರ್ ಇದ್ರೂ ತಡೆದುಕೊಳ್ಳಲು ರೆಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ
ಯಾರಿಗೋ ಬ್ಲಾಕ್ ಮೇಲ್ ಮಾಡುವಂತೆ ನನಗೆ ಮಾಡಲು ಬರಬೇಡಿ. ನನಗೆ ಥ್ರೆಟ್ ಮಾಡಿದ್ರೆ ಕೇಳ್ತೀನಾ.? ಎಂದು ಆಕ್ರೋಶ ವ್ಯಕ್ತಪಡಿಸಿದ ಡಿ ಕೆ ಶಿವಕುಮಾರ್, ಬಿಜೆಪಿ ವಿರುದ್ಧ ನಾವು ಆರೋಪ ಮಾಡಿದ್ದು ಸತ್ಯ. ಲೆಟರ್ ಕೊಟ್ಟಿದ್ದು ಸತ್ಯ. ಅಶ್ವಥ್ ನಾರಾಯಣ್, ಬೊಮ್ಮಾಯಿ ಸೇರಿದಂತೆ ಎಲ್ಲರೂ ತನಿಖೆ ಮಾಡಿ ಅಂತ ಸದನದಲ್ಲಿ ಅಂದಿದ್ದು ಸತ್ಯ ಆದ್ದರಿಂಂದ ತನಿಖೆಗೆ ಆದೇಶಿಸಲಾಗಿದೆ ಎಂದರು.
ಡಿಕೆಶಿ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಲ್ ಬಗ್ಗೆ ನೀವು ಯಾಕೆ ತಲೆ ಕೆಡಿಸ್ಕೊಳ್ತೀರಾ.? ತಪ್ಪು ಇಲ್ಲದವರು ಯಾಕೆ ವಿರೋಧ ಮಾಡಬೇಕು ಎಂದು ಹೇಳಿದರು.
ಅಜ್ಜಯ್ಯನ ಮಠಕ್ಕೆ ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲು ವಿಚಾರವಾಗಿ ಮಾತನಾಡಿದ ಡಿ ಕೆ ಶಿವಕುಮಾರ್, ಈ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಬಿಲ್ ವಿಚಾರವೂ ನನಗೆ ಗೊತ್ತಿಲ್ಲ. ಯಾವ ಗುತ್ತಿಗೆದಾರನ ಬಳಿಯೂ ನಾನು ಮಾತನಾಡಿಲ್ಲ. ನನಗೆ ಪ್ರಜ್ಞೆ ಇದೆ. ನನಗೆ ರಾಜಕಾರಣ ಗೊತ್ತಿದೆ. ಯಾರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.
ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ, ಈ ಬ್ಲ್ಯಾಕ್ ಮೇಲ್, ಥ್ರೆಟ್, ಬೆದರಿಕೆ, ರಾಜ್ಯಪಾಲರಿಗೆ ದೂರು ಕೊಡುವುದು, ಪ್ರಧಾನಿಗೆ ದೂರು ಕೊಡುವುದು ಏನು ಬೇಕಾದರು ಮಾಡಲಿ, ಕುಮಾರಸ್ವಾಮಿಯವರು ಗುತ್ತಿಗೆದಾರರನ್ನು ಭೇಟಿ ವಿಚಾರ ಸ್ವಾಭಾವಿಕ. ನಾವಿದ್ದಾಗಲೂ ಗುತ್ತಿಗೆದಾರರು ಭೇಟಿಯಾಗಿದ್ದರು ಎಂದರು.
ಒಂದೇ ತಿಂಗಳಲ್ಲಿ 1,000 ಕೋಟಿ ರೂಪಾಯಿ ಕೆಲಸ ಮಾಡಲು ಆಗುತ್ತಾ?
ನಾನು ಯಾರಿಗೂ ಪ್ರಮಾಣ ಮಾಡುವುದು ಬೇಕಾಗಿಲ್ಲ. ಉತ್ತರ ಕೊಡುವುದು ಬೇಕಾಗಿಲ್ಲ. ಕಾನೂನು ಉತ್ತರ ಕೊಡುತ್ತದೆ. ಕೆಲಸ ಮಾಡಿದರೆ ಬಿಲ್ ಕೊಡುತ್ತೇವೆ. ಇಲ್ಲವಾದರೆ ಕೊಡಲ್ಲ, ಒಂದೇ ತಿಂಗಳಲ್ಲಿ ಒಂದು ಸಾವಿರ ಕೋಟಿ ರೂ. ಮೊತ್ತದ ಕೆಲಸ ಆಗುತ್ತಾ? ಅದರ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆ, ಕೆಲಸ ಮಾಡಲಾಗಿದೆಯಾ ಎಂಬ ಬಗ್ಗೆ ದೃಢೀಕರಿಸಿದರೆ ಬಿಲ್ ಪಾವತಿ ಮಾಡುತ್ತಾರೆ ಎಂದರು.




