ಸುಂದರವಾದ ಸಂಸಾರವನ್ನ ದೇವರು ಹಾಳು ಮಾಡುಬಿಟ್ಟ. ಅವಳನ್ನ ನೋಡ್ತಿದ್ರೆ ಬದುಕೇ ಇದ್ದಾಳೆ ಅನಿಸುತ್ತೆ. ಸ್ಪಂದನಾ ಮುಖದಲ್ಲಿ ಕಳೆ ಹಾಗೇ ಇದೆ. ಈ ರೀತಿಯ ಸಾವು ಯಾರಿಗೂ ಬರಬಾರದು ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಭಾವುಕರಾದರು.
ಪ್ರವಾಸಕ್ಕೆ ಎಂದು ಬ್ಯಾಂಕಾಕ್ ಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ರಾಘವೇಂದ್ರ ಪತ್ನಿ ವಿಧಿವಶರಾದರು. ನಿನ್ನೆ ತಡರಾತ್ರಿ ಬ್ಯಾಂಕಾಕ್‌ನಿಂದ ಕಾರ್ಗೋ ವಿಮಾನದಲ್ಲಿ ತಂದ ಮೃತದೇಹವನ್ನ ಸುಮಾರು 30 ನಿಮಿಷಗಳ ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಇದೀಗ ಮಲ್ಲೇಶ್ವರಂನಲ್ಲಿರುವ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಅಂತಿಮ ದರ್ಶನದ ಬಳಿಕ ಹರಿಶ್ಚಂದ್ರ ಘಾಟ್ ನಲ್ಲಿ ಮೃತ ದೇಹ ಅಂತ್ಯಕ್ರಿಯೆ ನಡೆಯಲಿದೆ. ಹರಿಶ್ಚಂದ್ರ ಘಾಟ್ ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‍ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದ್ದು, ಈಡಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.