ಹಾವೇರಿ: ಜಾನಪದ ವಿವಿ ಕುಲಪತಿ ಡಾ ಟಿ ಎಂ ಭಾಸ್ಕರ್ ಅವರಿಗೆ ಸೈಬರ್ ವಂಚಕರು ವಂಚಿಸಿದ್ದು, ಕುಲಪತಿ ಅವರು ಶಿಗ್ಗಾಂವಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಲಪತಿ ಬ್ಯಾಂಕ್ ಅಕೌಂಟ್ ನಿಂದ 60,098 ರೂಪಾಯಿ ವಂಚಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿಎಂ ಭಾಸ್ಕರ್ ಅವರು ಸೇವೆ ಸಲ್ಲಿಸುತ್ತಿದ್ದರು.

ಟ್ರೂ ಕಾಲರ್ ನಲ್ಲಿ ಬ್ಯಾಂಕ್ ಎಂದಿರುವುದನ್ನು ನೋಡಿ ಪೋನ್ ಕಾಲ್ ರಿಸೀವ್ ಮಾಡಿದ್ದ ಕುಲಪತಿ, ನವೀನಕುಮಾರ ಎಂಬಾತ ಧಾರವಾಡ ಎಸ್ ಬಿಐ ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದ, ಪೋನ್ ಪೇ ದಿನದ ವಹಿವಾಟು 60 ಸಾವಿರದಿಂದ ಹೆಚ್ಚು ಮಾಡಲು ಲಿಂಕ್ ಒತ್ತಿ ಎಂದು ಹೇಳಿದ ವಂಚಕ, ಅದರಂತೆಯೇ ಕುಲಪತಿಯವರು ಲಿಂಕ್ ಓಪನ್ ಮಾಡಿದ್ದಾರೆ. ತತ್ ಕ್ಷಣವೇ ಕುಲಪತಿಯವರ ಅಕೌಂಟ್ ವನ್ನು ವಂಚಕ ಲಪಟಾಯಿಸಿದ್ದಾನೆ.

ಈ ಸಂಬಂಧ ಕುಲಪತಿಯವರು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
