ಬೆಂಗಳೂರು: ಸ್ಪಂದನಾ ಡಯೆಟ್ ಮಾಡ್ತಿದ್ರು. ತೀರ ದಪ್ಪಗಿದ್ದವ್ರು ಏಕಾಏಕಿ ತೂಕ ಇಳಿಕೆ ಮಾಡಿಕೊಂಡ್ರು. ಹೀಗಾಗಿಯೇ ಮೃತಪಟ್ಟಿದ್ದಾರೆ ಎಂಬ ಅಂತೆ ಕಂತೆ ಹೇಳಿಕೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ ನಟಿ ಮೇಘನಾ ರಾಜ್, ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡ್ಬೇಡಿ. ಆಕೆಗೆ ಮರ್ಯಾದೆ ಕೊಡಿ ಎಂದು ಕೇಳಿ ಕೊಂಡಿದ್ದಾರೆ.
ಮಲ್ಲೇಶ್ವರಂನ ನಿವಾಸಕ್ಕೆ ಆಗಮಿಸಿದ ನಟಿ ಮೇಘನಾ ರಾಜ್, ಸ್ಪಂದನಾ ರ ಅಂತಿಮ ದರ್ಶನ ಪಡೆದರು. ಬಳಿಕ ಮಾಧ್ಯಮಕ್ಕೆ ಮಾತನಾಡಿದ ಮೇಘನಾ ರಾಜ್, ರಾಘು-ಸ್ಪಂದನಾ ನಮಗೆ ಬಹಳ ಆತ್ಮೀಯರು. ಏನು ನಡೆದಿದೆ, ಏನು ಆಗಿದೆ ಅನ್ನೋದು ಅವರ ಕುಟುಂಬಕ್ಕೆ ಗೊತ್ತಿರುತ್ತೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ ಎಂದರು.
ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರುವ ಸುದ್ದಿಗಳನ್ನ ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೆಸ್ ಕೊಡಿ.ರಾಘು- ಸ್ಪಂದನಾ ನನ್ನ ಫಾಮಿಲಿ ಇದ್ದಂತೆ. ನಾವು ಇರೋ ಪರಿಸ್ಥಿತಿಯಲ್ಲಿ ಇನ್ನೊಂದು ಕುಟುಂಬನ ಹಾಗೇ ನೋಡೋಕೆ ಆಗಲ್ಲ. ನಮ್ಮ ಕುಟುಂಬನೇ ಅವರು. ನನ್ನ ಕುಟುಂಬಕ್ಕೆ ಆಗಿರೋ ನೋವಿದು ಎಂದು ಬೇಸರ ಗೊಂಡರು.