ಬೆಂಗಳೂರು: ಡಾ.ರಾಜ್ಕುಮಾರ್ ಕುಟುಂಬಕ್ಕೆ ಒಂದರ ಹಿಂದೆ ಒಂದು ಆಘಾತ ಎದುರಾಗಿದೆ. ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರ ಸ್ಪಂದನಾ ಸಾವು ನೋವಿನ ಕಡಲಲ್ಲಿ ಮುಳುಗಿಸಿದೆ. ಮೃತ ಸ್ಪಂದನಾರನ್ನ ನೋಡುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಗಳಗಳನೆ ಕಣ್ಣೀರು ಹಾಕಿದರು.

ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು, ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಪತ್ನಿ ಮೃತ ದೇಹದ ಮುಂದೆ ಕೂತಿರುವ ವಿಜಯ್ ರಾಘವೇಂದ್ರ ಪರಿಸ್ಥಿತಿ ಹೇಳ ತೀರದ ನೋವಿನಿಂದ ತುಂಬಿದ್ದು, ದೃಶ್ಯ ವನ್ನು ಹತ್ತಿರದಿಂದ ಕಂಡ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು.
ಇನ್ನು ಮೃತ ದೇಹ ನೋಡಲು ಬಂದ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತೀವ್ರ ದುಃಖ ದಲ್ಲಿ ಮುಳುಗಿ ಹೋದರು. ಸ್ಪಂದನಾರ ಮೃತ ದೇಹದ ಹತ್ತಿರ ಬರುತ್ತಿದ್ದಂತೆ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.




