ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂ. ಲಂಚದ ಬೇಡಿಕೆ : ಪ್ರಭಾಕರ್ ಸೈಲ್ ಆರೋಪ

ಮುಂಬೈ : ಬಾಲಿವುಡ್ ಬಾದ್ ಶಾ ಪುತ್ರ ಆರ್ಯನ್ ಖಾನ್ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್, ನೀಡಿರುವ ಹೇಳಿಕೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಐಷಾರಾಮಿ ಕ್ರೂಸ್ ಹಡಗಿನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳ್ಳಗಾಗಿರುವ ಆರ್ಯನ್ ಖಾನ್ ಈಗ ಅರ್ಥರ್ ರಸ್ತೆ ಜೈಲಿನಲ್ಲಿದ್ದಾರೆ. ಈತನ ಬಿಡುಗಡೆಗೆ 25ಕೋಟಿ ರೂಪಾಯಿ ಹಣದ ಬೇಡಿಕೆಯನ್ನ ಎನ್ ಸಿ ಬಿ ಪೊಲೀಸರು ಇಟ್ಟಿದ್ದರು ಎಂದು ಸೈಲ್ ಹೇಳಿದ್ದಾರೆ ಎನ್ನಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಹಾಗೆಯೇ 9 ಖಾಲಿ ಹಾಳೆಗಳ ಮೇಲೆ ತಮ್ಮ ಸಹಿಯನ್ನು ಪಡೆಯಲಾಗಿದೆ ಎಂದು ಸೈಲ್ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಗಳನ್ನ ಎನ್ ಸಿಬಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ, ಈ ಹೇಳಿಕೆಗಳು ಆಧಾರರಹಿತ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಎನ್ ಸಿ ಬಿ ಹೇಳಿದೆ.

ಸೈಲ್ ಅವರು ಏನಾದರು ಹೇಳಿಕೆ ನೀಡುವುದಿದ್ದರೆ ಅದನ್ನು ನ್ಯಾಯಾಲದ ಮುಂದೆ ನೀಡಬೇಕಿತ್ತು, ಈ ಪ್ರಕರಣದಲ್ಲಿ ಸೈಲ್ ಸಾಕ್ಷಿ ಎಂಬುದು ಸಾಮಾಜಿಕ ಜಾಲತಾಣದಿಂದ ತಿಳಿದುಬಂದಿದೆ ಎಂದು ಎನ್ ಸಿ ಬಿ ಉಪ ಮಹಾನಿರ್ದೇಶಕ ಮುಥಾ ಅಶೋಕ್ ಜೈನ್ ಹೇಳಿದ್ದಾರೆ.
ಸೈಲ್ ಮಾಡಿರುವ ಆರೋಪ ಬಹಳ ಗಂಭೀರವಾಗಿದ್ದು ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್ ಸಿ ಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ. ವಿಶೇಷ ತನಿಖಾ ತಂಡದಿಂದ ಈ ಪ್ರಕರಣದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಆರೋಪಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ ಸಿ ಬಿ ಖಾಲಿ ಹಾಳೆಯಲ್ಲಿ ಸಹಿ ಮಾಡಿಸಿದ್ದು ಆಘಾತಕಾರಿ ಅಂಶ,

ಹಾಗೆಯೇ ಬಾರೀ ಮೊತ್ತದ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನುವ ವರದಿಗಳಿವೆ. ಮಹಾರಾಷ್ಟ್ರದ ವರ್ಚಸ್ಸನ್ನು ಕುಂದಿಸುವುದಕ್ಕಾಗಿ ಈ ಪ್ರಕರಣವನ್ನು ಸೃಷ್ಠಿಸಲಾಗಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ಬವ್ ಠಾಕ್ರೆ ಹೇಳಿದ್ದರು. ಅದು ನಿಜವಾದಂತೆ ಕಾಣುತ್ತಿದೆ, ಪೊಲೀಸರ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

More News