ರಾಜ್ ಕುಟುಂಬಕ್ಕೆ ಒಂದರ ಮೇಲೊಂದರಂತೆ ಆಘಾತ ಎದುರಾಗಿದೆ.. ಇತ್ತೀಚೆಗೆ ಅಷ್ಟೇ ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನಲೆ ಇಡೀ ಕರುನಾಡು ಮರುಗಿತ್ತು. ಪುನೀತ್ ಇನ್ನಿಲ್ಲ ಎಂಬ ವಿಷಯವನ್ನು ದೊಡ್ಮನೆ ಕುಟುಂಬ ಸ್ವೀಕರಿಸಲು ಇನ್ನೂ ವ್ಯಥೆ ಪಡುತ್ತಿರುವ ಬೆನ್ನಲ್ಲೇ ಅತಿ ಸಣ್ಣ ವಯಸ್ಸಿನಲ್ಲೇ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇಹ ಲೋಕ ತ್ಯಜಿಸಿದರು. ಬಹಳ ಚನ್ನಾಗಿ ಇದ್ದವರು ಏಕಾಏಕಿ ಹೃದಯಾಘಾತದಿಂದ ಮೃತ ಪಟ್ಟ ವಿಷಯ ತಿಳಿದು ಇಡೀ ಚಿತ್ರರಂಗವೇ ಮರುಕ ವ್ಯಕ್ತಪಡಿಸಿತು. ಇದೀಗ ರಾಜ್ ಕುಟುಂಬದಲ್ಲಿನ ಅಕಾಲ ಮೃತ್ಯುವಿನ ಕುರಿತು ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳವನ್ನು ಕೇಳುವ ಚಿಂತನೆ ಯನ್ನು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಮಾಡಿದ್ದಾರೆ.

ಈ ಬಗ್ಗೆ ಖಾಸಗಿ ಚಾನಲ್ ಗೆ ಮಾತನಾಡಿರುವ ಸ್ವಾಮೀಜಿ,
ರಾಜ್ ಕುಮಾರ್ ಕುಟುಂಬದಲ್ಲಿ ಪುನೀತ್ ರಾಜ್‌ಕುಮಾರ್ ಹೃದಯ ಸಂಬಂಧಿಸಿದ ಸಮಸ್ಯೆ ಯಿಂದ ಮೃತಪಟ್ಟಿದ್ದರು. ಈಗ ಮತ್ತದೇ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಣ್ಣ ವಯಸ್ಸಿಗೆ ವಿಜಯ್ ಪತ್ನಿ ಸ್ಪಂದನಾ ಮೃತಪಟ್ಟಿದ್ದಾರೆ. ಇಂತಹ ಅಕಾಲ ಮೃತ್ಯು ಸಂಭವಿಸುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.
ರಾಜ್ ಕುಟುಂಬಕ್ಕೆ ಯಾಕೆ ಈ ರೀತಿಯಲ್ಲಿ ಅಕಾಲ ಮೃತ್ಯು ಸಂಭವಿಸುತ್ತಿದೆ ಎಂಬುದನ್ನು ತಿಳಿದು ಕೊಳ್ಳಲು ಕೇರಳ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳುವ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ತಿಳಸಿದರು.

ರಾಜ್ ಕುಟುಂಬದ ಲ್ಲಿ ಉಂಟಾದ ಹೃದಯಾಘಾತದ ಬಗ್ಗೆ
ಈಡಿಗ ಸಮುದಾಯದ ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಳ ಪ್ರಶ್ನೆ ಹಾಕಿ ಕೇಳಬೇಕು. ಈ ಬಗ್ಗೆ ಶಿವರಾಜ್ ಕುಮಾರ್ ರ ಜೊತೆಗೆ ಮಾತಾಡಿದ್ದೇನೆ. ಮನೆಯಲ್ಲಿ ಸ್ಪಂದನಾ ಸಾವಿನ ನಂತರ 11 ದಿನಗಳ ಕಾಲ ವಿವಿಧ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಈ ಎಲ್ಲ ಕ್ರಿಯೆಗಳು ಪೂರ್ಣಗೊಂಡ ಬಳಿಕ 41 ದಿನಗಳು ಪೂರೈಸಿದ ನಂತರ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳುತ್ತೇವೆ ಎಂದರು.

ಇನ್ನು ಅಧ್ಯಯನ ಒಂದರ ಪ್ರಕಾರ ಹೃದಯಾಘಾತ ವಿಚಾರದಲ್ಲಿ ಜೆನೆಟಿಕ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. 15% ಯುವ ಹೃದಯಾಘಾತ ಪ್ರಕರಣಗಳಲ್ಲಿ ಕುಟುಂಬದ ಇತಿಹಾಸವೂ ಪಾತ್ರ ವಹಿಸುತ್ತದೆ ಎಂಬ ವೈದ್ಯಕೀಯ ದಾಖಲಾತಿಯೂ ಇದ್ದು, ರಾಜ್ ಕುಟುಂಬಕ್ಕೂ ಇದೇ ರೀತಿಯ ಸಮಸ್ಯೆ ಯಾ ಎಂಬ ಚರ್ಚೆಯೂ ನಡೆಯುತ್ತಿದೆ.




