ಬೆಂಗಳೂರು : ಬಿಜೆಪಿಯವರು ಹತಾಶರಾಗಿದ್ದಾರೆ, ಅವರು ಎಲ್ಲಿ ಹೋಗಿ ದ್ವನಿ ಏರಿಸಬೇಕಿತ್ತೋ ಅಲ್ಲಿ ಏರಿಸುತ್ತಿಲ್ಲಾ, ಬಿಜೆಪಿ ಹೈಕಮಾಂಡ್ ಗೆ ಹೋಗಿ ವಿಪಕ್ಷ ನಾಯಕ ಸ್ಥಾನ ಕೊಡಿ ಅಂತಾ ದ್ವನಿ ಎತ್ತಿ ಆಗ ಬಿಜೆಪಿಗೆ ಗೌರವ ಬರುತ್ತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದು ಎರಡು ತಿಂಗಳಾಗಿದೆ, ಐದು ಗ್ಯಾರಂಟಿಗಳಲ್ಲಿ ಈಗಾಗಲೆ 4 ಗ್ಯಾರಂಟಿ ಜಾರಿಗೆ ತಂದಿದ್ದೀವೆ ಎಂದು ತಿಳಿಸಿದರು.
ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಸ್ಪಷ್ಟವಾಗಿ ಅವರು ನಾವು ಭ್ರಷ್ಟಾಚಾರದ ಆರೋಪ ಮಾಡುತ್ತಿಲ್ಲ, ಬಿಲ್ ವಿಳಂಬ ಆಗುತ್ತಿದೆ ಎಂದು ಹೇಳಿದ್ದಾರೆ, ಈಗಾಗಲೆ ಡಿಸಿಎಂ, ಸಚಿವರು ಸ್ಪಷ್ಟವಾಗಿ ಇದನ್ನೇ ಹೇಳಿದ್ದಾರೆ, ಕಾಮಗಾರಿ ಪರಿಶೀಲಿನೆ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಇದಕ್ಕೆ ಗುತ್ತಿಗೆದಾರರು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.

ಕೆಲಸ ಮಾಡಿದ್ರೆ ಬಿಲ್ ಪಾವತಿ ಮಾಡಿ ಅಂತಾ, ಬಿಜೆಪಿಗೆ ಯಾಕೆ ಇಂಟ್ರೆಸ್ಟ್ ? ನೀವು ಆಗಲೇ ಇದಕ್ಕೆ ಕಮಿಷನ್ ತೆಗೊಂಡಿದ್ದೀರಾ? ಎಂದು ಪ್ರಶ್ನಿಸಿದ ಅವರು, ಇವರು ಯಾಕೆ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ? 4೦% ಸರ್ಕಾರ ಅಂತಾ ಖ್ಯಾತಿ ಪಡೆದಿದ್ದು ನೀವು, ನಾವಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ಆಗಿದ್ರೆ ಖಂಡಿತವಾಗಿ ಬಿಲ್ ಪಾವತಿ ಆಗುತ್ತೆ ಅಂತ ಸಿಎಂ ಹೇಳಿದ್ದಾರೆ, ಅದರಿಂದ ಬಿಜೆಪಿಯವರಿಗೆ ನನ್ನ ಸಲಹೆ ಏನಂದ್ರೆ ದಯವಿಟ್ಟು ಕಾಂಗ್ರೆಸ್ ಬಗ್ಗೆ ಮಾತಾಡೋದು ಬಿಟ್ಟು ನೀವು ನಿಮ್ಮ ವಿರೋಧ ಪಕ್ಷದ ನಾಯಕರು ಯಾರು ಅಂತ ಆಯ್ಕೆ ಮಾಡಿ, ಆದು ಆದ ಮೇಲೆ ಪ್ರಶ್ನೆ ಮಾಡಿ ಎಂದು ಟಿಕೀಸಿದರು.




