Haveri Half Murder Case: ಹಾವೇರಿ ಡಿಸಿ ಕಛೇರಿ ಎದುರೇ ನಡೆದು ಬಿಡ್ತು ಭೀಕರ ಹಾಫ್ ಮರ್ಡರ್..!

ಹಾವೇರಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಿದೆ. ಕೈಗೆ ಸಿಕ್ಕದ್ದನ್ನ,‌ ಕಸಿದುಕೊಳ್ಳಬೇಕು ಅನಿಸಿದ್ದನ್ನೆಲ್ಲಾ ರಾಜಾರೋಷವಾಗಿ ಜನರಿಂದ ಕದ್ದು ಓಡ್ತಿದ್ದವರ ಸಂಖ್ಯೆ ಹೆಚ್ಚಾಗಿದೆ ಎಂಬ ಕಳವಳ ಬೆನ್ನಲ್ಲೇ ಇದೀಗ ಹಾವೇರಿ ಜಿಲ್ಲೆಯಲ್ಲಿ ನಡೆದ ಹಾಫ್ ಮರ್ಡರ್ ದೃಶ್ಯ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.

ಯಾಲಕ್ಕಿ ನಾಡಿನಲ್ಲಿ SBI ನಿವೃತ್ತ ಬ್ಯಾಂಕ್ ಮಾನೇಜರ್ ಕೊಲೆಗೆ ಸ್ಕೆಚ್ ಹಾಕಿದ್ದನ್ನ ಕಂಡು ಅಕ್ಷರಶಃ ಜನ ಕಂಗಾಲಾಗಿ ಹೋಗಿದ್ದಾರೆ. ಬಸವೇಶ್ವರ ನಗರದ ಜಯರಾಮ್ ಕೊಲ್ಲಾಪೂರ ಎಂಬ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮಗನೊಂದಿಗೆ ಬೈಕ್ ನಲ್ಲಿ ಡಿಸಿ ಕಚೇರಿಗೆ ಹೋಗುವ ವೇಳೆ ಏಕಾಏಕಿ ಅಡ್ಡಗಟ್ಟಿದ ನಾಲ್ವರು ಅಪರಿಚಿತ ವ್ಯಕ್ತಿಗಳು ಹಾವೇರಿ ಡಿಸಿ ಆಫೀಸ್ ಬಳಿಯೇ ಹಾಫ್ ಮರ್ಡರ್ ಮಾಡಿದ ಘಟನೆ ನಡೆದಿದೆ.

ಡಿಸಿ ಆಪೀಸ್ ಗೆ ತೆರಳಿದ್ದ ತಂದೆ ಜಯರಾಮ್ ಮತ್ತು ಮಗನ ಬೈಕ್ ಅಡ್ಡಗಟ್ಟಿ, ಎರಡು ಬೈಕ್ ನಲ್ಲಿ ಬಂದ ನಾಲ್ಕು ಮಂದಿ ಮೂರು ನಾಲ್ಕು ಬಾರಿ ಚಾಕು ಇರಿದು ಪರಾರಿಯಾಗಿದ್ದಾರೆ. ಇನ್ನು ಗಾಯಗೊಂಡ ವ್ಯಕ್ತಿಯನ್ನ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು,, ಹಾವೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.‌

More News