TWEET AND DELETED FROM CONGRESS: ಬಿಬಿಎಂಪಿ ಬೆಂಕಿ ಕೃತ್ಯದ ಹಿಂದೆ ಬಿಜೆಪಿ ನಾಯಕರ ಕೈವಾಡ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಾಂಗ್ರೆಸ್

ಬೆಂಗಳೂರು : ಬಿಬಿಎಂಪಿಯ ಕ್ವಾಲಿಟಿ ಕಂಟ್ರೋಲ್ ರೂಂಗೆ ಬೆಂಕಿ ವಿಚಾರ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಈ ಕೃತ್ಯದ ಹಿಂದೆ ಬಿಜೆಪಿ ನಾಯಕರ ಕೈವಾಡ ಎಂದು ಹೇಳಿತ್ತು. ಈ ಟ್ವೀಟ್ ನಿಂದ ಪೇಚಿಗೆ ಸಿಲುಕಿದ ರಾಜ್ಯ ಕಾಂಗ್ರೆಸ್, ಕೂಡಲೇ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

ಟ್ವೀಟ್ ಮಾಡಿ ಇದೀಗ ಡಿಲೀಟ್ ಮಾಡಿರೋ ಕಾಂಗ್ರೆಸ್, 40% ಕಮಿಷನ್ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ಬೆಂಕಿ ಹೆಚ್ಚಿದ್ದಾರೆ, ಬೆಂಕಿ ಬಿದ್ದಿರುವುದು ಆಕಸ್ಮಿಕವಲ್ಲ. ಷಡ್ಯಂತ್ರ. ಭ್ರಷ್ಟಾಚಾರ ದಾಖಲೆಗಳಿಗೆ ಬೆಂಕಿ ಇಟ್ಟು ಬಚಾವಾಗಲು ಬಿಜೆಪಿ ಯತ್ನ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.

ನಂತರ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೆ ಈ ಟ್ವೀಟ್ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More News