RAPE CASE: ಮಹಿಳೆ ಮೇಲೆ ರೇಪ್ ಕೇಸ್: ಸ್ಯಾಂಡಲ್ ವುಡ್ ನಟ ಅರೆಸ್ಟ್

ಬೆಂಗಳೂರು: ಸ್ವಯಂ ಕೃಷಿ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಉದ್ಯಮಿ ವೀರೇಂದ್ರ ಬಾಬು ಮಹಿಳೆ ಅತ್ಯಾಚಾರ ಆರೋಪದ ಅಡಿ ಅಂದರ್ ಆಗಿದ್ದಾರೆ. ಮಹಿಳೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿ, ಕೊಲೆ ಬೆದರಿಕೆ ಆರೋಪ ಹಿನ್ನಲೆ ನಟ, ನಿರ್ಮಾಪಕ ವೀರೇಂದ್ರ ಬಾಬುರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರ ಮಾಡಿ, ಅದರ ವಿಡಿಯೋ ರೆಕಾರ್ಡ್ ಮಾಡಿ, ಹಣಕ್ಕಾಗಿ ಬೆದರಿಕೆ ಹಾಕ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವೀರೇಂದ್ರ ಬಾಬು ರನ್ನ ಅರೆಸ್ಟ್ ಮಾಡಲಾಗಿದೆ. 2021 ರಲ್ಲಿ ಮಹಿಳೆ ಮೇಲೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಲಾಗಿದೆ. ಅದರ ವೀಡಿಯೋ ರೆಕಾರ್ಡ್ ಮಾಡಿ, ಹಣ ಕೊಡದಿದ್ರೆ ವೀಡಿಯೋ ಬಿಡುಗಡೆ ಮಾಡೋದಾಗಿ ಹೆದರಿಸಿ, 15 ಲಕ್ಷ ಹಣವನ್ನು ಪೀಕಿದ್ದಾನೆ. ಇದೀಗ ಮತ್ತೇ ಹಣದ ಬೇಡಿಕೆ ಹಿನ್ನಲೆಯಲ್ಲಿ ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದು, ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವೀಡಿಯೋ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ ಕಾರಣ ನನ್ನ ಬಳಿ ಇದ್ದ ಚಿನ್ನಾಭರಣ ಎಲ್ಲಾ ಮಾರಿ, ಹಣ ಕೊಟ್ಟಿದ್ದೇನೆ. ‌ಬಳಿಕ ಮತ್ತೇ ಜುಲೈ 30ರಂದು ಬೆದರಿಕೆ ಹಾಕಿ ತಮ್ಮ ಬಳಿ ಕರೆಸಿಕೊಂಡು ಕಾರಿನಲ್ಲಿ ಕರೆದುಕೊಂಡೋಗಿ, ಇನ್ನಷ್ಟು ಹಣ ತರಬೇಕೆಂದು ಧಮ್ಕಿ ಹಾಕಿ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಎಂದು ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ವೀರೇಂದ್ರ ಬಾಬುರನ್ನು ವಶಕ್ಕೆ ಪಡೆದಿದ್ದು, ಆತನ ಸ್ನೇಹಿತರ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆ ಆರೋಪದ ಅಡಿ ಎಫ್ ಐ ಆರ್ ದಾಖಲಿಸಲಾಗಿದೆ.

More News