Chandrayaan 3 Mission: ಆ.13 ಕ್ಕೆ ಚಂದ್ರನ ಕಕ್ಷೆಯಲ್ಲಿ ಮೊದಲ ಸುತ್ತು ಪೂರ್ಣಗೊಳಿಸಲಿರುವ ಚಂದ್ರಯಾನ-3

ಭಾರತದ ಬಹು ನಿರೀಕ್ಷಿತ ಚಂದ್ರಯಾನ ೩ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಆ.೧೩ರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಯಾನ 3 ಚಂದ್ರನ ಕಕ್ಷೆಯಲ್ಲಿ ಮೊದಲ ಸುತ್ತನ್ನು ಪೂರ್ಣಗೊಳಿಸಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರೂಪಿಸಿರುವ ಚಂದ್ರಯಾನ ೩ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈಗಾಗಲೇ ಚಂದ್ರಯಾನ 3 ಮತ್ತೊಂದು ಹಂತವಾದ ಚಂದ್ರನ ಕಕ್ಷೆ ಪ್ರವೇಶಿಸಿದ್ದು, ಇನ್ನು ಮುಂದಿನ 18 ದಿನಗಳ ಕಾಲ ಚಂದ್ರಯಾನ 3 ಚಂದ್ರನ ಸುತ್ತಲೇ ಪ್ರದಕ್ಷಿಣೆ ಹಾಕಲಿದೆ.
ಚಂದ್ರಯಾನ-3 ರ ಮುಂದಿನ ಕಾರ್ಯಾಚರಣೆ – ಕಕ್ಷೆ ಕಡಿತ – ಭಾನುವಾರ ರಾತ್ರಿ 11 ಗಂಟೆಗೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಮೊದಲ ಸುತ್ತು ಪೂರ್ಣ:

ಜುಲೈ 14 ರಂದು ಉಡಾವಣೆಯಾದ ಮೂರು ವಾರಗಳಲ್ಲಿ, ಇಸ್ರೋ ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಯಿಂದ ದೂರ ಕಕ್ಷೆಗೆ ತೆಗೆದುಕೊಳ್ಳುತ್ತಿದೆ. ನಾಳೆ ಅಂದರೆ ಆ. 13 ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಚಂದ್ರಯಾನ 3 ಚಂದ್ರನ ಕಕ್ಷೆಯಲ್ಲಿ ಮೊದಲ ಸುತ್ತನ್ನು ಪೂರ್ಣಗೊಳಿಸಲಿದೆ.
ಕಳೆದ ಜುಲೈ 14 ರಂದು ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಚಂದ್ರಯಾನ 3 ಉಡಾವಣೆ ಮಾಡಲಾಗಿತ್ತು.
ಸದ್ಯ ಚಂದ್ರಯಾನ 3 ತನ್ನ ಪ್ರಯಾಣದ ಮೂರನೇ ಎರಡರಷ್ಟು ಭಾಗ ಪೂರ್ಣಗೊಳಿಸಿದೆ.
ಚಂದ್ರಯಾನ-3 ಮುಂದಿನ 18 ದಿನಗಳ ಕಾಲ ಚಂದ್ರನ ಸುತ್ತ ಸುತ್ತಿ  ಆಗಸ್ಟ್ 23 ಅಥವಾ 24 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಹೇಳಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ-3 ‘ಸಾಫ್ಟ್ ಲ್ಯಾಂಡಿಂಗ್’ ಪಡೆಯಲು ಪ್ರಯತ್ನಿಸುತ್ತದೆ. ಆಗಸ್ಟ್ 1 ರ ಆರಂಭದಲ್ಲಿ, ಬಾಹ್ಯಾಕಾಶ ನೌಕೆಯು ಟ್ರಾನ್ಸ್-ಲೂನಾರ್ ಇಂಜೆಕ್ಷನ್ ಮೂಲಕ 288 ಕಿಮೀ 3.7 ಲಕ್ಷ ಕಿಮೀ ಕಕ್ಷೆಯನ್ನು ಹಾಗು ಚಂದ್ರನ ಪ್ರಭಾವದ ವಲಯವನ್ನು ಪ್ರವೇಶಿಸಿದೆ. ಚಂದ್ರಯಾನ-3 ಅನ್ನು
ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಇರಿಸಲಾಗಿದೆ. ಪೆರಿಲುನ್ ಚಂದ್ರನಿಗೆ ಬಾಹ್ಯಾಕಾಶ ನೌಕೆಯ ಹತ್ತಿರದ ಬಿಂದುವಾಗಿದೆ. ಬೆಂಗಳೂರು ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ ಬಾಹ್ಯಾಕಾಶ ನೌಕೆಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಎಲ್ಲಾ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ತಿಳಿಸಿದೆ. 

More News