ಬೆಂಗಳೂರು: ತಡರಾತ್ರಿ ದೇವನಹಳ್ಳಿಯ ಹುಣಸೇಮಾರನಹಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಶನಿವಾರ ರಾತ್ತಿ ನಡೆದಿದೆ.
ಮಧ್ಯರಾತ್ರಿಯ ಸಮಯದಲ್ಲಿ ನಂದಿಹಿಲ್ಸ್ ಗೆ ಟ್ವಿಪ್ ಗೆ ಹೊರಟಿದ್ದ ಐವರು ವಿದ್ಯಾರ್ಥಿಗಳ ಕಾರು ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟರೇ, ಇನ್ನು ಮೂವರು ಸಣ್ಣಪುಟ್ಟ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಕಾರ್ತಿಕ್ ಜೈನ್, ಆದರ್ಶ್ ಕುಮಾರ್ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಕಾರಿನಲ್ಲಿ ನಂದಿ ಹಿಲ್ಸ್ ಗೆ ಟ್ರಿಪ್ ಹೊರಟಿದ್ದ ವಿದ್ಯಾರ್ಥಿಗಳಿದ್ದ ಹ್ಯೂಂಡೈಯ್ ಐ 10 ಕಾರು ಹುಣಸೇ ಮಾರನಹಳ್ಳಿ ಸಮೀಪ ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ.
ರಾತ್ರಿ ಸುಮಾರು 2.30ರ ಹೊತ್ತಿಗೆ ನಂದಿ ಹಿಲ್ಸ್ ಗೆ ಹೋಗೋದು ಬೇಡ ಎಂದು ವಾಪಸ್ಸು ಬರುತ್ತಿದ್ದ ವಿದ್ಯಾರ್ಥಿಗಳು, ನಿದ್ದೆ ಮಂಪರಿನಲ್ಲಿ ರೋಡ್ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಕಾರ್ತಿಕ್ ಜೈನ್ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಆದರ್ಶ್ ಕೊನೆಯುಸಿರೆಳೆದಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
#YALAHANKAPOLICE #INTERNATIONALAIRPORTRAOD #HUNESEMARANAHALLI #STUDENTSDEATH #ACCIDENT #NANDHIHILLS #TRIP




