ಬೆಂಗಳೂರು: ಬಿಜೆಪಿಯ ಮಾಜಿ ಶಾಸಕ ಸಿ.ಟಿ ರವಿಗೂ ಟ್ರೀಟ್ಮೆಂಟ್ ಬೇಕಾಗಿದೆ ಅತೀ ಶೀಘ್ರದಲ್ಲೇ ಕೊಡೋಣ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನ್ ಪಡೆದಿಲ್ಲ ಅನ್ನೋದಾದ್ರೆ ಅಜ್ಜಯ್ಯನ ಮೇಲೆ ಆಣೆ ಮಾಡುವಂತೆ ಮಾಜಿ ಶಾಸಕ ಸಿ.ಟಿ ರವಿ ಹೇಳಿಕೆ ನೀಡಿದ್ದಕ್ಕೆ ಈ ಮೇಲಿನಂತೆ ಅವರು ಪ್ರತಿಕ್ರಿಯೆ ನೀಡಿದರು.
ಎರಡು ದಿನ ಕಳಿಯಲಿ, ಕಂಟ್ರಾಕ್ಟರ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ, ಕಂಟ್ರಾಕ್ಟರ್ಸ್ ಅವರಿಗೆ ಆಗಿರೋ ಸಮಸ್ಯೆ ನನಗೆ ಬೇಸರ ತಂದಿದೆ. ಆದ್ರೆ ಹೇಗೆ ಕಂಟ್ರಾಕ್ಟರ್ಸ್ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋ ವಿಚಾರ ಬಹಿರಂಗ ಮಾಡಲಾಗುವುದು, ಎಲ್ಲದಕ್ಕೂ ದಾಖಲೆ ಇಟ್ಟು ಮಾತನಾಡುತ್ತೇನೆ ಎಂದರು.
ಅಶ್ವತ್ಥ್ ನಾರಾಯಣ ಅಲ್ಲ ನವರಂಗಿ ನಾರಾಯಣ
ಮಾಜಿ ಸಚಿವ ಅಶ್ವಥ್ ನಾರಾಯಣ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ, ಅಶ್ವತ್ಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ, ಕಳ್ಳರನ್ನ ರಕ್ಷಣೆ ಮಾಡೋದ್ರಲ್ಲಿ ಅವರಿಗೆ ಡಾಕ್ಟರೇಟ್ ನೀಡಬೇಕು ಎಂದು ಖಾರವಾಗಿ ಪ್ರತಿಕ್ರಯಿಸಿದರು.
ರಾಮನಗರಕ್ಕೆ ಬಂದು ಕ್ಲೀನ್ ಮಾಡ್ತೀನಿ ಅಂದ್ರು. ಅವರ ಪಾರ್ಟೀನೇ ಕ್ಲೀನ್ ಮಾಡಿ ಹೋದ್ರು. ಆ ಮೆಂಟಲ್ ಟೆನ್ಷನ್‌ನಲ್ಲಿ ಇದಾರೆ. ಬೆಂಗಳೂರು ನಗರದಲ್ಲಿ, ಅವರ ಇಲಾಖೆಯಲ್ಲಿ ಏನು ಮಾಡಿದ್ರು ಅಂತ ಇನ್ನೂ ತೆಗೆದಿಲ್ಲ. ಟೈಮ್ ಬರುತ್ತೆ ಆಗ ಎಲ್ಲವೂ ಗೊತ್ತಾಗಲಿದೆ ಎಂದು ಹರಿಹಾಯ್ದರು.

ಅವರು ಕಂಪ್ಲೀಟ್ ಏನು ಮಾಡಿದ್ರು, ಹೇಗೆ ಎತ್ತಿ ಕಟ್ಟಿದ್ರು ಗೊತ್ತಾಗ್ತಿದೆ. ಕೆಲಸ ಯಾರು ಮಾಡಿದ್ದಾರೆ, ಯಾರು ನಿಜವಾಗಿ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ತನಿಖೆ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಏನೆಲ್ಲಾ ಆಟ ಆಡ್ತಿದ್ದಾರೆ, ಏನ್ ಗೇಮ್ ಮಾಡ್ತಿದ್ದಾರೆ ಮಾಡಲಿ. ಮೊನ್ನೆಯೇ ಈ ಬಗ್ಗೆ ಮಾತನಾಡಬೇಕಿತ್ತು. ಆದ್ರೆ ಬಿಬಿಎಂಪಿಯಲ್ಲಿ ಒಂದು ಬೆಂಕಿ ಅವಘಡವಾಗಿತ್ತು. ಇವತ್ತು ಬೇಡ ಪಾರ್ಟಿ ಕೆಲಸ ಇದೆ. ಇಂಡಿಪೆಂಡೆನ್ಸ್ ಡೇ ಮುಗೀಲಿ ಮಾತಾಡ್ತೀನಿ ಎಂದರು.




