Upendra Case: ಕಬ್ಜ ಸ್ಟಾರ್ ಗೆ ಹಲವು ಕೇಸ್ ಗಳ ಬಿಸಿ: ಹೈಕೋರ್ಟ್ ರಿಲೀಫ್ ನೀಡಿದ್ರೂ ಜನಾಕ್ರೋಶ ತಣ್ಣಗಾಗ್ತಿಲ್ಲ

ಬೆಂಗಳೂರು: ಮಾತಿನ ಭರದಲ್ಲಿ ಬಳಸಿದ ಪದವೊಂದು ನಟ ಉಪೇಂದ್ರ ರನ್ನು ಪೇಚಿಗೆ ಸಿಲುಕಿಸಿದೆ. ಇಲ್ಲ ಇಲ್ಲ ನಾ ಹಾಗೆ ಹೇಳಿಲ್ಲ.. ನಾನೂ ಬಡ ಕುಟುಂಬದಿಂದ ಬಂದವ್ನು. ಕಷ್ಟ ಕಂಡಿದ್ದೇನೆಂದು ವಿಧವಿಧವಾಗಿ ಕ್ಷಮೆ ಯಾಚಿಸಿದರೂ, ನಟನ ವಿರುದ್ಧ ಆಕ್ರೋಶ ತಣ್ಣಗಾಗ್ತಿಲ್ಲ.

ಅವಹೇಳನಕಾರಿ ಗಾದೆ ಬಳಸಿ ಮಾತನಾಡಿದ ವಿಡಿಯೋ ಒಂದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ನಟನ ಹೇಳಿಕೆಯಿಂದ ರೊಚ್ಚಿಗೆದ್ದ ಜನ, ಎರಡೆರಡು ಎಫ್ ಐಆರ್ ದಾಖಲಿಸಿ, ಅಟ್ರಾಸಿಟಿ ಕೇಸ್ ರಿಜಿಸ್ಟರ್ ಮಾಡಿದ್ದರು. ಇದರ ಬೆನ್ನಲ್ಲೇ ಕಾನೂನು ಮೊರೆ ಹೋದ ಉಪೇಂದ್ರ ರಿಗೆ ಹೈಕೋರ್ಟ್ ರಿಲೀಫ್ ಏನೋ ನೀಡ್ತು. ಆದ್ರೆ ದಲಿತ ಸಂಘಟನೆಗಳ ಆಕ್ರೋಶ ತಣ್ಣಗಾಗೋ ಲಕ್ಷಣ ಕಾಣ್ತಿಲ್ಲ.

ಉಪೇಂದ್ರ ವಿರುದ್ಧ ಅಟ್ರಾಸಿಟಿ ಸೆಕ್ಷನ್3(1) ನಲ್ಲಿ ದಲಿತನಲ್ಲದ ವ್ಯಕ್ತಿಯಿಂದ ದಲಿತನಿಗೆ ನಿಂದನೆ. ಜೊತೆಗೆ 31(1)(r) ಅಡಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕವಾಗಿ ನಿಂಧನೆ, 3(1)(r)(s) ಅಡಿ ಸಾರ್ವಜನಿಕರಿಗೆ ತಿಳಿಯುವ ಉದ್ದೇಶದಿಂದ ನಿಂದನೆ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಅಡಿ 6 ತಿಂಗಳಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ.

ಇನ್ನು IPC ಸೆಕ್ಷನ್ 505 (1)(c) ಜನಾಂಗದ ಬಗ್ಗೆ ತಪ್ಪಾಗಿ ಹೇಳಿಕೆ ನೀಡೋದು, ಪ್ರಕಟಿಸುವುದರ ಬಗ್ಗೆ ಈ ಸೆಕ್ಷನ್ ನಲ್ಲಿ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇದೆ. ಅಲ್ಲದೇ ಐಪಿಸಿ ಸೆಕ್ಷನ್ 153 A ಅಡಿ, ಜಾತಿ ಧರ್ಮದ ನಡುವೆ ದ್ವೇಷ ಬಿತ್ತುವುದು ಎಂಬ ಪ್ರಕರಣ ದಾಖಲಿಸಿದ್ದು, 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇನ್ನು ಐಪಿಸಿ ಸೆಕ್ಷನ್ 295 ಎ ಅಡಿ ಧಾರ್ಮಿಕ ಭಾವನೆ ಧಕ್ಕೆ , ಧರ್ಮ ನಿಂದನೆ ಪ್ರಕರಣ ದಾಖಲಾಗಿದ್ದು, ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ.

ಹೈ ಕೋರ್ಟ್ ನಲ್ಲಿ ಒಂದು ಕೇಸ್ ಮಾತ್ರ ರಿಲೀಫ್: ಬಾಕಿ ಉಳಿದಿವೆ ಹಲವು ಕೇಸ್

ನಟ ಉಪೇಂದ್ರರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ನಟನ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಲು ಸಾಲು ಪ್ರಕರಣ ದಾಖಲಾಗ್ತಿದೆ. ಕೋರ್ಟ್ ಮೊರೆಯಿಂದಾಗಿ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ‌ ಕೇಸ್ ನಿಂದ ಉಪೇಂದ್ರ ಬಚಾವ್ ಆಗಿದ್ದಾರೆ. ಇನ್ನುಳಿದ ಕೇಸ್ ಹಾಗೇ ಬಾಕಿ ಇದೆ. ಇದರ ನಡುವೆಯೇ ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದಲಿತ ಸಂಘಟನೆಯಿಂದ ಮತ್ತೊಂದು ಕೇಸ್ ದಾಖಲಾಗಿದ್ದು, ಸಧ್ಯಕ್ಕೆ ಈ ವಿಷಯ ತಣ್ಣಗಾಗೋ ಲಕ್ಷಣ ಕಾಣ್ತಿಲ್ಲ.

More News