Hostel Hudugaru: ಹಾಸ್ಟಲ್ ಹುಡುಗರು ಚಿತ್ರದಲ್ಲಿ ರಮ್ಯಾ ಬದಲಿಗೆ ಆ್ಯಂಕರ್ ರಶ್ಮಿ

ಕಿರಿಕ್, ಗಲಾಟೆ, ಗದ್ದಲ ಮೂಲಕ ಸಿನಿ ಇಂಡಸ್ಟ್ರಿ ಯಲ್ಲಿ ಸದ್ದು ಮಾಡಿದ್ದ, ಬಹುತೇಕ ಹೊಸಬರೇ ಸೇರಿ ಮಾಡಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್ ಮಾಡಿದೆ.
ಒಂದು ಸಿಂಪಲ್ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಭೇಷ್ ಎನಿಸಿ ಕೊಂಡಿತ್ತು. ಇದೀಗ ಚಿತ್ರ ತೆಲುಗು ಚಿತ್ರರಂಗದತ್ತ ಚಿತ್ತ ನೆಟ್ಟಿದ್ದಾರೆ.

ಹೀರೊ, ಹೀರೊಯಿನ್ ಕಾನ್ಸೆಪ್ಟ್ ಬದಲಿಗೆ ಹಾಸ್ಟೆಲ್‌ ಹುಡುಗರ ಭಿನ್ನ ಭಿನ್ನವಾದ ಜೀವನ ಕಥೆಯನ್ನ ತೆರೆಯ ಮೇಲೆ ತಂದು ಚಿತ್ರತಂಡ ಕಮಾಲ್ ಮಾಡಿತ್ತು.. ಅದರಲ್ಲೂ ನಟಿ ರಮ್ಯಾ ಎಂಟ್ರಿ ಟೈಮಿಂಗ್ ಕಡಿಮೆ ಇದ್ರೂ ಎಷ್ಟ್ ಸಾಧ್ಯವೋ ಅಷ್ಟ್ ಚಂದವಾಗಿ ತೆರೆ ಮೇಲೆ ಭಿತ್ತರಿಸಿದ್ದು, ಸಿನಿಮಾ 5ನೇ ವಾರಕ್ಕೆ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿರುವ ನಡುವೆಯೇ ತೆಲುಗಿಗೆ ಡಬ್ ಆಗಿ ರಿಲೀಸ್ ಮಾಡಲು ಚಿತ್ರರಂಡ ನಿರ್ಧರಿಸಿದೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರಮಂದಿರಗಳಲ್ಲಿ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಬೇರೆ ಭಾಷೆಯಲ್ಲೂ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಚಿತ್ರದ ಡಬ್ಬಿಂಗ್ ಕಾರ್ಯ ನಡೆಯುತ್ತಿದ್ದು, ಕೆಲ ಪಾತ್ರದ ಚಿತ್ರೀಕರಣ ಕೂಡ ಶುರುವಾಗಿದೆ.

ಸಿನಿಮಾ ಬಿಡುಗಡೆ ವೇಳೆ ಪೇಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮತ್ತೇ ತೆಲುಗು ವರ್ಷನ್ ನಲ್ಲಿ ಚಿತ್ರ ತೆರೆಗೆ ಬರ್ತಿದ್ದು, ರಮ್ಯಾರ ಬದಲಿಗೆ ಆ್ಯಂಕರ್ ರಶ್ಮಿ
ಲೆಕ್ಚರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನೆಲಮಂಗಲ ಬಳಿ ಆ ಸನ್ನಿವೇಶಗಳ ಚಿತ್ರೀಕರಣ ಕೂಡ ನಡೆಯುತ್ತಿದೆ.

More News