Tension For Upendra: ನಟ ಉಪೇಂದ್ರಗೆ ಟೆನ್ಷನ್ ಟೆನ್ಷನ್: FIR ವಜಾಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ತಮ್ಮ ಮೇಲೆ ದಾಖಲಾಗಿರುವ ಕೇಸ್ ನಿಂದ ಖುಲಾಸೆಗೊಳಿಸುವಂತೆ ಹೈ ಕೋರ್ಟ್ ಮೊರೆ ಹೋಗಿದ್ದ ಉಪೇಂದ್ರ ಗೆ ನಿರಾಸೆಯಾಗಿದೆ. ಕೇಸ್ ವಜಾ ಗೊಳಿಸುವಂತೆ ಸಲ್ಲಿಸಿದ ಅರ್ಜಿ ಮುಂದೂಡಿಕೆ ಆಗಿದೆ.

ಈ ಮೊದಲು ತಮ್ಮ ವಿರುದ್ಧ ದಾಖಲಾದ ಕೇಸ್ ವಿರುದ್ಧ ಕಾನೂನು ಮೊರೆ ಹೋಗಿದ್ದ ನಟ ಉಪೇಂದ್ರಾಗೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ‌ ಕೇಸ್ ನಿಂದ ಬಚಾವ್ ಆಗಿ ಹೊರ ಬಂದಿದ್ದರು. ಇನ್ನುಳಿದ ಹಲವು ಕೇಸ್ ಬಾಕಿ ಇದೆ. ಇದರ ಜೊತೆಗೆ ದಿನದಿಂದ ದಿನಕ್ಕೆ ಕೇಸ್ ಹಾಕುತ್ತಿರುವವರ ಸಂಖ್ಯೆ ಹೆಚ್ಚಾಗ್ತಲೇ ಇದೆ. ಹೀಗಾಗಿ ಹಲಸೂರು ಗೇಟ್ ಠಾಣೆ ಸೇರಿ ಉಳಿದ ಠಾಣೆಗಳ ಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಲಿದ್ದರು. ಆದ್ರೆ ಈ ವಿಚಾರದ ಕುರಿತು ಇಂದು ವಿಚಾರಣೆ ನಡೆಸಲು ಹೈಕೋರ್ಟ್ ತಿರಸ್ಕರಿಸಿದ್ದು, ನಾಳೆ ವಿಚಾರಣೆ ಕೈಗೆತ್ತಿಕೊಳ್ಳೋದಾಗಿ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ರ ಏಕಸದಸ್ಯ ಪೀಠ ತಿಳಿಸಿದೆ.

ಉಪೇಂದ್ರ ವಿರುದ್ಧ ದಾಖಲಾಗಿರುವ ಕೇಸ್ ಯಾವ್ಯಾವುದು..?

ನಟ ಉಪೇಂದ್ರ ವಿರುದ್ಧ ಅಟ್ರಾಸಿಟಿ ಸೆಕ್ಷನ್ 3(1) ನಲ್ಲಿ ದಲಿತನಲ್ಲದ ವ್ಯಕ್ತಿಯಿಂದ ದಲಿತನಿಗೆ ನಿಂದನೆ. ಜೊತೆಗೆ 31(1)(r) ಅಡಿ ಉದ್ದೇಶ ಪೂರ್ವಕವಾಗಿ ಸಾರ್ವಜನಿಕವಾಗಿ ನಿಂಧನೆ, 3(1)(r)(s) ಅಡಿ ಸಾರ್ವಜನಿಕರಿಗೆ ತಿಳಿಯುವ ಉದ್ದೇಶದಿಂದ ನಿಂದನೆ ಪ್ರಕರಣ ದಾಖಲಾಗಿದ್ದು, ಈ ಸೆಕ್ಷನ್ ಅಡಿ 6 ತಿಂಗಳಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇನ್ನು IPC ಸೆಕ್ಷನ್ 505 (1)(c) ಜನಾಂಗದ ಬಗ್ಗೆ ತಪ್ಪಾಗಿ ಹೇಳಿಕೆ ನೀಡೋದು, ಪ್ರಕಟಿಸುವುದರ ಬಗ್ಗೆ ಈ ಸೆಕ್ಷನ್ ನಲ್ಲಿ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇದೆ. ಅಲ್ಲದೇ ಐಪಿಸಿ ಸೆಕ್ಷನ್ 153 A ಅಡಿ, ಜಾತಿ ಧರ್ಮದ ನಡುವೆ ದ್ವೇಷ ಬಿತ್ತುವುದು ಎಂಬ ಪ್ರಕರಣ ದಾಖಲಿಸಿದ್ದು, 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಇನ್ನು ಐಪಿಸಿ ಸೆಕ್ಷನ್ 295 ಎ ಅಡಿ ಧಾರ್ಮಿಕ ಭಾವನೆ ಧಕ್ಕೆ , ಧರ್ಮ ನಿಂದನೆ ಪ್ರಕರಣ ದಾಖಲಾಗಿದ್ದು, ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಶಿಕ್ಷೆ ಇದೆ.

More News