Lokayukta Raid: ಬೆಳ್ಳಂ ಬೆಳಗ್ಗೆ ಭ್ರಷ್ಟರ ಹೆಡೆಮುರಿ ಕಟ್ಟಿದ ಲೋಕಾ: ಅಧಿಕಾರಿಗಳ ಕರ್ಮ ಕಾಂಡ ಬಗೆದಷ್ಟು ಬಯಲು

ಬೆಳ್ಳಂ ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾ ದಾಳಿ ನಡೆದಿದೆ. ಬೀದರ್, ಕೊಡಗು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಕನೇಕ ಕಡೆ ದಾಳಿ ನಡೆದಿದ್ದು, ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಿದ್ದಾರೆ.

ಲೋಕಾಯುಕ್ತ ಡಿವೈಎಸ್ ಪಿ ಒಲೇಕಾರ ನೇತೃತ್ವದ ಅಧಿಕಾರಿಗಳ ತಂಡ ರಾಜ್ಯದ ವಿವಿಧೆಡೆ ಇರುವ ಭ್ರಷ್ಟ ಅಧಿಕಾರಿಗಳ ಹೆಡೆ ಮುರಿ ಕಟ್ಟಲು ಸಜ್ಜಾಗಿದೆ. ದಾವಣಗೆರೆ ಯ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಹೇಶ್, ಬೀದರ್ ನ ಪೊಲೀಸ್ ಕಾನ್ ಸ್ಟೇಬಲ್
ವಿಜಯಕುಮಾರ್ ಮನೆ, ಮಡಿಕೇರಿಯಲ್ಲಿ ಕೊಡಗು ವಿ ನಂಜುಂಡೇಗೌಡ
ಮನೆ ಸೇರಿದಂತೆ ಅನೇಕ ಕಡೆ ದಾಳಿ ಮಾಡಿದ ಅಧಿಕಾರಿಗಳು, ಬೆಂಗಳೂರಿನ ಬಿಬಿಎಂಪಿ ಕಛೇರಿ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ.

ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರಿನ ಹಿನ್ನಲೆಯಲ್ಲಿ ದಾವಣಗೆರೆಯ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಮಹೇಶ್ ಮನೆಗೆ ಬೆಳ್ಳಂ ಬೆಳಗ್ಗೆ ದಾಳಿ ಮಾಡಿದ ಲೋಕಾ ಅಧಿಕಾರಿಗಳು, ಮಹೇಶ್ ಪತ್ನಿ ಭಾರತಿ ಬಿಬಿಎಂಪಿ ಎಇ ಆಗಿದ್ದು ಅವರ ಮೇಲೂ ದಾಳಿ ನಡೆಸಲಾಗಿದೆ.

ಇನ್ನು ಬೀದರ್ ಜಿಲ್ಲೆಯ ಚಿಟಗುಪ್ಪ ಠಾಣೆಯ ಕಾನ್ಸ್‌ಟೇಬಲ್ ವಿಜಯ್ ಕುಮಾರ್ ಮೇಲೂ ಲೋಕಾ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಒಲೇಕಾರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳಿಗೆ ಮಹತ್ವದ ದಾಖಲೆ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಇನ್ನು 18 ಕಡೆ ದಾಳಿ ನಡೆಯುವ ಸಾಧ್ಯತೆ ‌ಇದ್ದು, ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆಯೇ..? ಎಂದು ಪರಿಶೀಲನೆ ನಡೆಸಲಿದ್ದಾರೆ.

More News