ಇಂಧೋರ್: ಸಾಕು ನಾಯಿಗಳ ವಿಚಾರವಾಗಿ ವಾಗ್ವಾದ ನಡೆದ ವಾಗ್ವಾದ ಇಬ್ಬರ ಸಾವಿನೊಂದಿಗೆ ಅಂತ್ಯಗೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಸಾಕು ವಿಚಾರವಾಗಿ ಜಗಳವಾಡುತ್ತಿದ್ದಾಗ ಭದ್ರತಾ ಸಿಬ್ಬಂದಿಯೊಬ್ಬರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಯನ್ನು ಕೃಷ್ಣಾಭಾಗ್ ಕಾಲೋನಿಯ ರಾಜ್ ಪಾಲ್ ಎಂದು ಗುರುತಿಸಲಾಗಿದೆ.
ನೆರೆಹೊರೆಯವರು ಸಾಕುನಾಯಿ ವಿಚಾರವಾಗಿ ಜಗಳವಾಡುತ್ತಿದ್ದರು. ಎರಡು ಮನೆಯ ಕಡೆಯವರಿಗೂ ಜೋರಾಗಿಯೇ ಮಾತಿನ ಚಕಮಕಿ ನಡೆಯುತ್ತಿತ್ತು. ಅಕ್ಕಪಕ್ಕದ ಮನೆಯವರು ಸಾಕಷ್ಟು ಸಂಖ್ಯೆಯಲ್ಲಿ ನರೆದಿದ್ದರು. ಈ ಸಂದರ್ಭದಲ್ಲಿ ಕೋಪಗೊಂಡ ಹೋಮ್ ಗಾರ್ಡ್ ರಾಜ್ ಪಾಲ್, ತಮ್ಮ ಬಳಿಯಿದ್ದ ಗನ್ ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ನಂತರ ಮನೆ ಮುಂದೆ ನೆರೆದಿದ್ದವರ ಮೇಲೆ ಗುಂಡು ಹಾಕಿಸಿದ್ದಾನೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.




