Minister’s Secret Letter To High Command: ಸುಧಾಮ ದಾಸ್ ನೇಮಕಕ್ಕೆ ಪಕ್ಷದಲ್ಲೇ ವಿರೋಧ: ಹೈಕಮಾಂಡ್ ಗೆ ತಲುಪಿದ ಸಚಿವರ ರಹಸ್ಯ ಪತ್ರ

ಬೆಂಗಳೂರು: ಕಾಂಗ್ರೆಸ್ ಒಳಗೆ ಮತ್ತೇ ಪರಿಷತ್ತು ಫೈಟ್ ಶುರುವಿಟ್ಟಿದೆ.
ಪರಿಷತ್ ಗೆ ಸುಧಾಮ್ ದಾಸ್ ನಾಮನಿರ್ದೇಶನಕ್ಕೆ ಪಕ್ಷದೊಳಗೆ ಜಟಾಪಟಿ ಏರ್ಪಟ್ಟಿದ್ದು, ನಾಲ್ಕು ಮಂದಿ ಸಚಿವರ ಅಸಮಧಾನ ಪತ್ರ ಹೈಕಮಾಂಡ್ ಗೆ ತಲುಪಿದೆ.

ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದ ಪರಮೇಶ್ವರ್, ಮುನಿಯಪ್ಪ,ಮಹದೇವಪ್ಪ,ತಿಮ್ಮಾಪುರ, ಸುಧಾಮ್ ದಾಸ್ ಐಆರ್ ಎಸ್ ಅಧಿಕಾರಿಯಾಗಿ ಇದ್ದವರು. ಕೆಲ ವರ್ಷಗಳ ಹಿಂದೆ ಏಕಾಏಕಿ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಮಾರ್ಚ್ 2023ಕ್ಕೆ ಮಾಹಿತಿ ಆಯುಕ್ತರ ಹುದ್ದೆಗೂ ರಾಜಿನಾಮೆ ನೀಡಿದ್ದಾರೆ. 2023 ಕ್ಕೆ ಕಾಂಗ್ರೆಸ್ ಪಾರ್ಟಿ ಸೇರಿದ್ದಾರೆ. ಹೀಗಾಗಿ ಇವರನ್ನ ಪರಿಷತ್ ನಾಮನಿರ್ದೇಶನಕ್ಕೆ ಪರಿಗಣಸಬೇಡಿ ಎಂದು ಪತ್ರ ಬರೆಯಲಾಗಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ ಎಚ್ ಮುನಿಯಪ್ಪ, ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನಿಜ. ಸುಧಾಮ್ ದಾಸ್ ಮೂರು ತಿಂಗಳ ಹಿಂದಿನ ತನಕ ಸರ್ಕಾರಿ ಅಧಿಕಾರಿ ಆಗಿದ್ರು. ಅವರು ಪಕ್ಷಕ್ಕೆ ಈಗಷ್ಟೇ ಬಂದಿದ್ದಾರೆ. ಇನ್ನೊಂದಿಷ್ಟು ದಿನಗಳ ಕಾಲ ಸುಧಾಮ್ ದಾಸ್ ಪಕ್ಷಕ್ಕೆ ಕೆಲಸ ಮಾಡಲಿ.

೩೦ ವರ್ಷಗಳ ಕಾಲದಿಂದ ಕೆಲಸ ಮಾಡಿದ ದಲಿತ ನಾಯಕರಿಗೆ ಅವಕಾಶ ನೀಡಲಿ ಎಂಬುದಷ್ಟೇ ನಮ್ಮ ಸಲಹೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಪತ್ರ ಬರೆದಿರುವುದು ಸತ್ಯ. ಆದ್ರೆ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಹೈಕಮಾಂಡ್ ನಾಯಕರ ನಿರ್ಧಾರ ಮುಖ್ಯ ಎಂದರು.
ಡಿಕೆಶಿವಕುಮಾರ್ ರನ್ನು ವಿರೋಧಿಸಲು ಪತ್ರ ಬರೆದರಾ ಎಂಬ ಪ್ರಶ್ನೆಗೆ ಅದಕ್ಕೆ ನಾನು ಈಗ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿ ಹೊರಟರು.

ಸುಧಾಮ್‌ ದಾಸ್ ನಾಮ ನಿರ್ದೇಶನಕ್ಕೆ ವಿರೋಧ ವ್ಯಕ್ತಪಡಿಸಿ ಪತ್ರ ಬರೆದ ವಿಚಾರದ ಕುರಿತು ಮಾತನಾಡಿದ ಮತ್ತೋರ್ವ ಸಚಿವರಾದ ಆರ್.ಬಿ. ತಿಮ್ಮಾಪುರ್, ಪಕ್ಷದ ವೇದಿಕೆಯಲ್ಲಿ ನನ್ನ ವಿಚಾರಗಳನ್ನು ತಿಳಿಸಿದ್ದೇನೆ.
ಪಕ್ಷದ ವರಿಷ್ಠರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಅದನ್ನೆಲ್ಲಾ ಮಾಧ್ಯಮಗಳ ಮುಂದೆ ಪ್ರಸ್ತಾಪಿಸುವುದಿಲ್ಲ.
ವರಿಷ್ಟರು ಸೂಕ್ತ ಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಪತ್ರದ ಬಗ್ಗೆ ಸ್ಪಷ್ಟನೆ ನೀಡಲು ಹಿಂದೇಟು ಹಾಕಿದರು.

More News