PSI RE-EXAMINATION: ಪಿಎಸ್ ಐ ಮರು ಪರೀಕ್ಷೆ ಫಿಕ್ಸ್. ಆದ್ರೆ 540 ಕೇಸ್ ಇತ್ಯರ್ಥ ಬಳಿಕ ಪರೀಕ್ಷೆ: ಗೃಹ ಜಿ ಪರಮೇಶ್ವರ್

ಧಾರವಾಡ: ಪಿಎಸ್ ಐ ಮರು ಪರೀಕ್ಷೆಗೆ ತೀರ್ಮಾನಿಸಿದ್ದೇವೆ. ಆದ್ರೆ 540 ಪೋಸ್ಟ್ ನ ಕೇಸ್ ಇತ್ಯರ್ಥ ಆಗೋವರೆಗೂ ಮರು ನೇಮಕಾತಿ ಮಾಡೋಕೆ ಆಗಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ..

ಪಿಎಸ್ಐ ನೇಮಕಾತಿ ವಿಚಾರ ದ ಕುರಿತು ಧಾರವಾಡದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪಿಎಸ್ ಐ ಎರಡು ಭಾಗ ಇದೆ. ಈಗಾಗಲೇ ವಿಚಾರಣೆ ನಡೆಯುತ್ತಿದೆ.ಹಿರಿಯ ಅಧಿಕಾರಿಯನ್ನು ದಸ್ತಗಿರಿ ಮಾಡಿ ಇಟ್ಟಿದ್ದಾರೆ. ಸ್ಕ್ಯಾಮ್ ಮಾಡಿದ್ರು. ಆದ್ರೆ ಇದೀಗ ಮರುಪರಿಕ್ಷೆ ಮಾಡಬೇಕು ಅಂತ ತೀರ್ಮಾನ ಮಾಡಿತ್ತು.
ಆದ್ರೆ ಮಾಡಬಾರದು ಅಂತ ಕೋರ್ಟ್ ಗೆ ಹೋಗಿದ್ದಾರೆ.
ಕೋರ್ಟ್ ನಮಗೆ ಹೇಳಿತ್ತು ಏನು ಮಾಡ್ತೀರಿ ಎಂದು. ನಾವು ಮತ್ತೆ ಮರು ಪರೀಕ್ಷೆ ಮಾಡಲು ತೀರ್ಮಾನಿಸಿದ್ದೇವೆ. 540 ಜನರ ಇತ್ಯರ್ಥ ಆಗೋವರೆಗೂ ಮರು ನೇಮಕಾತಿ ಮಾಡೋಕೆ ಆಗಲ್ಲ. ಸಿನಿಯಾರಿಟಿ ಸಮಸ್ಯೆ ಆಗುತ್ತೆ, ಹೀಗಾಗಿ ಅದನ್ನ ಕ್ಲಿಯರ್ ಮಾಡಬೇಕಿದೆ ಎಂದರು.

ಸೌಜನ್ಯ ಕೇಸ್ ಕುರಿತು ಮಾತನಾಡಿದ ಅವರು, ಸೌಜನ್ಯ ಪ್ರಕರಣ ಕಾನೂನಾತ್ಮಕವಾಗಿ ಇದೆ.
ಸರ್ಕಾರ ಇದರಲ್ಲಿ ಏನು ಮಾಡೋಕಾಗಲ್ಲ ಎಂದು ತಿಳಿಸಿದರು.

ಹುಬ್ಬಳ್ಳಿ ಗಲಭೆ ಕೇಸ್ ಕುರಿತು ಮಾತನಾಡಿದ ಅವರು,
ಅಮಾಯಕರ ಮೇಲೆ ಪ್ರಕರಣ ದಾಖಲಾಗಿದೆ.
ಕ್ಯಾಬಿನೆಟ್ ನಲ್ಲಿ ಈ ವಿಚಾರ ತಂದು ಇಡುತ್ತಾರೆ, ಅದನ್ನ ಮುಂದೆ ಏನು ಮಾಡಬೇಕು ಅನ್ನೋ ತೀರ್ಮಾನ ಆಗುತ್ತೆ.
ಒಂದು ವೇಳೆ ತನಿಖೆ ಆಗಬೇಕು ಅಂದ್ರೆ ಆಗುತ್ತೆ.
ಇಲ್ಲದಿದ್ರೆ ಅದು ಕ್ಲೋಸ್ ಆಗುತ್ತೆ.
ಆದ್ರೆ ಪ್ರಕರಣವನ್ನ ಹಾಗೆಲ್ಲ ಹಿಂಪಡೆಯಲು ಆಗಲ್ಲ ಎಂದರು.

More News