ಹುಬ್ಬಳ್ಳಿ: ನಿಂತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಬ್ಬಳ್ಳಿ ರಿಂಗ್ ರೋಡ್ ಯಲ್ಲಿ ನಡೆದಿದೆ.
ಕರ್ತವ್ಯ ನಿರತ ಇಲಾಖೆ ಚಾಲಕ ರಫೀಕ್ ನದಾಫ್ ಮೃತ ದುರ್ದೈವಿ. ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಲಾರಿ ತಪಾಸಣೆ ವೇಳೆ ದುರ್ಘಟನೆ ನಡೆದಿದೆ.

ಸರಕು ಸಾಗಣೆ ವಾಹನಗಳ ತಪಾಸಣೆ ಮಾಡ್ಬೇಕೆಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿ ತಡೆದು ತಪಾಸಣೆ ಮಾಡುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಲಾರಿಯೊಂದನ್ನ ತಡೆದು ತಪಾಸಣೆ ನಡೆಸುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ.

ಘಟನೆಯಿಂದ ಕರ್ತವ್ಯ ನಿರತ ಇಲಾಖೆ ಚಾಲಕ ರಫೀಕ್ ನದಾಫ್ ಮೃತಪಟ್ಟಿದ್ದು, ಇಬ್ಬರು ಅಧಿಕಾರಿಗಳು ಸ್ವಲ್ಪದರಲ್ಲೇ ಪ್ರಾಣಾಪಯದಿಂದ ಪಾರಾಗಿದ್ದಾರೆ.




