Love Breakup Story: 70 ರ ಅಜ್ಜನಿಂದ ಪ್ರೀತಿಸಿ ವಂಚನೆ: ಠಾಣೆ ಮೆಟ್ಟಿಲೇರಿದ 63 ರ ವೃದ್ಧೆ

ಮದ್ವೆ ಆಗೋದಾಗಿ ನಂಬಿಸಿ ಈಗ ಅವಾಯ್ಡ್ ಮಾಡ್ತಿದ್ದಾರೆಂದು ವೃದ್ಧೆ ದಯಾಮಣಿ ಮನ ನೊಂದು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಒಂದೇ ಏರಿಯಾದವರಾದ ವೃದ್ಧ ಲೋಕನಾಥ್ (70) , ವೃದ್ಧೆ ದಯಾಮಣಿ(60) ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು.‌ ಐದಾರು ವರ್ಷಗಳಿಂದ ಪ್ರೇಮಿಗಳಂತೆ ಸಿನಿಮಾ ಪಾರ್ಕ್ ಎಂದು ವೃದ್ಧ ಪ್ರೇಮಿಗಳು ಓಡಾಡಿಕೊಂಡಿದ್ದಾರೆ. ಈ ವೇಳೆ ಲೋಕನಾಥ್ ಮಗನಿಗೆ ಈ ಹಿಂದೆ ಮದುವೆಯಾಗಿ ಡಿವೋರ್ಸ್ ಆಗಿದೆ. ಮಗನಿಗೆ ಮತ್ತೆ ಮದುವೆ ಮಾಡೋಣ ಎಂದು ದಯಾಮಣಿ ಬಳಿ ಲೋಕನಾಥ್ ಕೇಳಿದ್ದಾರೆ. ಹೀಗಾಗಿ ದಯಾಮಣಿ ಲೋಕನಾಥ್ ಮಗನ ಮತ್ತೊಂದು ಮದುವೆಗೆ ಹೆಣ್ಣು ಹುಡುಕಿದ್ದಾರೆ. ಮುಂದಿನ ತಿಂಗಳೇ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ. ಈ ನಡುವೆ ನಾವೂ ಮದುವೆಯಾಗೋಣ ಅಂತ ದಯಾಮಣಿ ಹೇಳಿದ್ದಾರೆ. ಆಗ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದ ಲೋಕನಾಥ್, ಮಗನ‌ ಮದುವೆ ಆಗ್ಲಿ ನಮ್ಮ ಮದುವೆ ಬೇಡ ಎಂದಿದ್ದಾರೆ.

ಬಳಿಕ ಮದುವೆ ಆಗುವಂತೆ ಒತ್ತಾಯ ಮಾಡಿದ ಬಳಿಕ ವೃದ್ಧೆ ದಯಾಮಣಿಯನ್ನ ವೃದ್ಧ ಲೋಕನಾಥ್ ಅವಾಯ್ಡ್ ಮಾಡುತ್ತಿದ್ದರಂತೆ. ಈ ಸಂಬಂಧ ಪ್ರಶ್ನೆ ಮಾಡಿದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನಂತೆ. ವೃದ್ಧನ ನಡವಳಿಕೆಯಿಂದ ಬೇಸತ್ತ ದಯಾಮಣಿ ಸಿಟ್ಟಾಗಿ ಅವಾಯ್ಡ್ ಮಾಡಲು ಪ್ರಾರಂಭಿಸಿದರಂತೆ. ಒಮ್ಮೆ
ವೃದ್ದ ಕರೆದಾಗ ಹೋಗಿಲ್ಲ ಎಂಬ ಕಾರಣಕ್ಕೆ ಕೆಟ್ಟ ಶಬ್ಧ ಬಳಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ ಎಂದು ವೃದ್ಧೆ ದೂರು ನೀಡಿದ್ದಾರೆ.

ಸದ್ಯ ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದ ಲೋಕನಾಥ್ ವಿರುದ್ಧ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More News