CM Siddaramaiah Demand: ರಾಜ್ಯದ ಪಾಲು ರಾಜ್ಯಕ್ಕೆ ನೀಡಿ: ಹಣಕಾಸಿನ ಬೇಡಿಕೆ ಇಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ೧೫ ನೇ ಹಣಕಾಸು ಆಯೋಗದ ಶಿಫಾರಸ್ಸು ಅನ್ವಯ ರಾಜ್ಯಕ್ಕೆ ವಿಶೇಷ ಮತ್ತು ನಿರ್ದಿಷ್ಟ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ,
೧೫ ನೇ ಹಣಕಾಸು ಆಯೋಗ ಕರ್ನಾಟಕದ ಪಾಲನ್ನು ಕಡಿತಗೊಳಿಸಿದೆ. ಹಣಕಾಸು ಆಯೋಗ ಆದಾಯದ ವಿಚಾರದಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ದೂರಿದ್ದಾರೆ. ‌

GSDP (Gross State Domestic Product)
ಲೆಕ್ಕ ಹಾಕಲು ಹೊಸ ನಿಯಮ ಅನುಸರಿಸುತ್ತಿದೆ. ಇತರೆ ರಾಜ್ಯಗಳ GSDP ಸರಾಸರಿ ಶೇ 9 ಇದ್ದರೆ, ಕರ್ನಾಟಕದ ಪಾಲು ಶೇ 30 ರಷ್ಟು ಇದೆ. ಕೇಂದ್ರದಿಂದ ರಾಜ್ಯಕ್ಕೆ ಪಾಲು ಶೇ 4.2 ನಿಂದ 1.1 ಇಳಿಕೆ ಆಗಿದೆ. ೧೪ ನೇ ಹಣಕಾಸು ಆಯೋಗ ಪ್ರಕಾರ ಶೇ 4.61 ಇತ್ತು. ೧೫ ನೇ ಹಣಕಾಸು ಆಯೋಗ ಪ್ರಕಾರ ಶೇ 2.64 ಆಗಿದೆ ಎಂದು ವಿವರಿಸಿದ್ದಾರೆ.

೨೦೧೧-೧೨ ಪ್ರಕಾರ ಐಟಿ ಕ್ಷೇತ್ರದಲ್ಲಿ ರಾಜ್ಯ ಅತ್ಯುತ್ತಮ ಬೆಳವಣಿಗೆ ಕಂಡಿದೆ. ೧೪ ನೇ – ೧೫ ನೇ ಹಣಕಾಸು ಆಯೋಗ ತುಲನೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ಪಾಲು ರೂ 37,011 ಕೋಟಿಗೆ ಇಳಿದಿದೆ. ೨೦೨೦-೨೧ ಆರ್ಥಿಕ ವರ್ಷ ಪ್ರಕಾರ ೧೫ ನೇ ಹಣಕಾಸು ಆಯೋಗವೂ ರೂ 5495 ಕೋಟಿಗೆ ಶಿಫಾರಸ್ಸು ಮಾಡಿತ್ತು. ೨೦೨೧-೨೬ ಹಣಕಾಸು ಆಯೋಗ ರೂ ೬ ಸಾವಿರ ಕೋಟಿ ರೂಪಾಯಿ ಯನ್ನ ಬೆಂಗಳೂರಿನ ನೀರಾವರಿ ಕಾಮಗಾರಿ ಹಾಗೂ ಪೆರಿಪೆಲರ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದ್ರೆ ಯಾವುದೇ ಅನುದಾನ ಕರ್ನಾಟಕ ಸರ್ಕಾರಕ್ಕೆ ನೀಡಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಹಿನ್ನಡೆ ಆಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶೇಷ ಅನುದಾನ ಮತ್ತು ನಿರ್ದಿಷ್ಟ ಅನುದಾನ ಮೊದಲ ಆದ್ಯತೆ ನೀಡಬೇಕೆಂದು ಸಿಎಂ ಆಗ್ರಹಿಸಿದ್ದಾರೆ.

More News