ಹುಬ್ಬಳ್ಳಿ: ನಾವು ಪಕ್ಷಕ್ಕೆ ಕರೆದುಕೊಳ್ಳಲು ಸ್ಟಾರ್ಟ್ ಮಾಡಿದರೇ ಬಿಜೆಪಿ, ಜೆಡಿಎಸ್ ನಲ್ಲಿ ಯಾರು ಇರಲ್ಲ. ನಾವು ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ನಮ್ಮ ತತ್ವ ಸಿದ್ಧಾಂತಗಳನ್ನು ನೋಡಿಕೊಂಡು ಬರುವವರು ಇದ್ದರೆ ಬರಲಿ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವವರು ಬಿಜೆಪಿಗರು.
ಯಾವುದೇ ಒಂದೇ ಒಂದು ಯೋಜನೆಯನ್ನು ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ತಂದಿಲ್ಲ. ಎನ್ಇಪಿ ಬಗ್ಗೆ ವಿರೋಧ ಎಂಬುವಂತದ್ದು, ಸರಿಯಲ್ಲ. ಯೋಜನೆಗೆ ದುಡ್ಡು ಇಲ್ಲ ಅಂತ ಯಾರು ಹೇಳಿದ್ದಾರೆ. ಎಲ್ಲ ಯೋಜನೆಗಳಿಗೂ ಹಣವಿದೆ. ಆದ್ರೆ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಈ ನಿಟ್ಟಿನಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದರು.

ಡ್ರಗ್ಸ್ ದಂಧೆ ನಡೆದಿರುವುದು ಬಿಜೆಪಿ ಸರ್ಕಾರ ಇದ್ದಾಗ. ಆದ್ರೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರಕರಣಕ್ಕೆ ಕಡಿವಾಣ ಹಾಕುತ್ತಿದ್ದೇವೆ.
ಕುಮಾರಸ್ವಾಮಿ ಅವರ ಫೆನ್ ಡ್ರೈವ್ ನಲ್ಲಿ ಏನು ಹುರಳಿಲ್ಲ. ಬುಟ್ಟಿಯಲ್ಲಿ ಹಾವಿಟ್ಟು ಹಾವಿದೆ ಹಾವಿದೇ ಎಂದು ಹೆದರಿಸುವ ಮೂಲಕ ಕುಮಾರಸ್ವಾಮಿ ಹತಾಶರಾಗಿದ್ದಾರೆ. ವರ್ಗಾವಣೆ ಎಲ್ಲ ಸರ್ಕಾರದ ಅವಧಿಯಲ್ಲಿಯೂ ಆಗಿದೆ. ಸರಿಯಾದ ದಾಖಲಾತಿ ನೀಡದೇ ಹರಾಜು ಪ್ರಕ್ರಿಯೆ ಎಂದು ಹೇಳುವುದು ಸರಿಯಲ್ಲ ಎಂದರು.




