ISRO: ಸೂರ್ಯನ ಅಧ್ಯಯನಕ್ಕೂ ಮುಂದಾದ ಇಸ್ರೋ: ಸೆಪ್ಟೆಂಬರ್ ನಲ್ಲಿ ಆದಿತ್ಯಾ L1 ಕಕ್ಷೆಗೆ

ಚಂದ್ರನ ಅಧ್ಯಯನ ಬೆನ್ನಲ್ಲೇ ಇದೀಗ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ. ಆದಿತ್ಯಾ L1 ಎಂಬ ಉಪಗ್ರಹ ಉಡಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.

ಸೌರವ್ಯೂಹ ಸೂರ್ಯನ ಮೇಲೆ ಅವಲಂಬಿಸಿದೆ. ಸೂರ್ಯ ಭೂಮಿಯಿಂದ ಬರೋಬ್ಬರಿ 159 ಮಿಲಿಯನ್ ಮೀಟರ್ ದೂರದಲ್ಲಿದೆ. ಸೂರ್ಯನಿಂದ ಭೂಮಿ ಗೆ ಅಪ್ಪಳಿಸುವ ಕಿರಣಗಳು ಮಿಲಿಯನ್ ಕಿಲೋ ಮೀಟರ್/ ಗಂಟೆ ರೀತಿ ಬರುತ್ತೆ. ಅಂದ್ರೆ ಸೂರ್ಯನ ಬೆಳಕು ಭೂಮಿ ಗೆ ತಲುಪಲು 8 ರಿಂದ 9 ನಿಮಿಷ ಬೇಕಾಗುತ್ತೆ. ಸೂರ್ಯನ ಮುಂದೆ ಭೂಮಿ ಗೌಣ. ಆದ್ರೆ ಭೂಮಿಯಲ್ಲಿ ಜೀವರಾಶಿ ಇರುವ ಹಿನ್ನೆಲೆ ಸೂರ್ಯನ ಅಧ್ಯಯನ ಅವಶ್ಯಕವಾಗಿದೆ. ಹೀಗಾಗಿ ಆದಿತ್ಯ L1 ಮೂಲಕ 15 ಕಿಲೋಮೀಟರ್ ಲಕ್ಷ ದೂರದವರೆಗೂ ತೆರಳಿ ಸೂರ್ಯನ ಅಧ್ಯಯನ ಮಾಡುವ ಉಪಗ್ರಹ ಉಡ್ಡಯನಕ್ಕೆ ಇಸ್ರೋ ನಿರ್ಧರಿಸಿದೆ.

ಅಧ್ಯಯನದ ಅನಿವಾರ್ಯತೆ ಏನು..?

ಸೂರ್ಯನ ಲ್ಲಿ 12 ಮತ್ತು 22 ವರ್ಷಕ್ಕೆ ಒಂದು ಬಾರಿ ಹೆಚ್ಚು ಎಮಿಷನ್ ನಡೆಯುತ್ತೆ. ಆಗ ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನ್ ಹೆವಿ ಅಯಾನ್ ಸೂರ್ಯನಿಂದ ಹೊರ ಬರುತ್ತೆ. ಇದು ಭೂಮಿ ಸುತ್ತ ಸುತ್ತುತ್ತಿರುವ ಸ್ಯಾಟಲೈಟ್ ಗೆ ಹಾನಿ ಮಾಡೋ ಸಾಧ್ಯತೆ ಇದೆ. ಜೊತೆಗೆ ಭೂಮಿ ಜೀವ ರಾಶಿ ಮೇಲೆ ಸೂರ್ಯ ಬಹುಮುಖ್ಯ ಪಾತ್ರವಹಿಸಿರುವ ಕಾರಣ ಅಧ್ಯಯನ ಕ್ಕೆ ಸಿದ್ಧತೆ ನಡೆಸಲಾಗಿದೆ.

ಹೇಗಿದ್ದಾನೆ ಆದಿತ್ಯಾ L1..?

ಆದಿತ್ಯಾ L1 ಸ್ಯಾಟಲೈಟ್1500 ಕೆಜಿ ತೂಕ ಹೊಂದಿದ್ದು, ಇದು 1400 ವ್ಯಾಟ್ ಪವರ್ ಇದೆ. ಅದರಲ್ಲಿ
ಎನ್ಹ್ಯಾನ್ಸ್ ವಿಸಿಬಲ್ ಎಮಿಷನ್ ಲೆನ್ ಕರೋನಾಗ್ರಫಿ, ಹೈ ಎನರ್ಜಿ ಎಲ್ 1 ಆರ್ಬಿಟಿಂಗ್ ಎಕ್ಸೇ ಪೆಕ್ಟ್ರೋ ಮೀಟರ್,
ಪ್ಲಾಸ್ಮಾ ಅನಲೈಸರ್ ಪ್ಯಾಕೇಜ್, ಸೋಲಾರ್ ವಿಂಡ್ ಹ್ಯಾಂಡ್ ಥರ್ಮಲ್ ಅಯಾನ್ ಫೆಕ್ಟ್ರೋಮೀಟರ್, ಸೋಲಾರ್ ಲೋ ಎನರ್ಜಿ ಎಕ್ಸ್ ರೇ ಸ್ಫ್ರೆಕ್ಟ್ರೋ ಮೀಟರ್, ಮತ್ತು ಕೊನೆಯದಾಗಿ ಸೋಲಾರ್ ಅಲ್ಟ್ರಾ ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಪೇಲೋಡ್ ಗಳನ್ನು ಅಳವಡಿಸಲಾಗಿದೆ. ಐದು ವರ್ಷದ ಜೀವಿತಾವಧಿಯ ಆದಿತ್ಯಾ L1, ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಹರಿಕೋಟ ಸತೀಶ್ ಧವನ್ ಕೇಂದ್ರ ದಿಂದ ಉಡಾವಣೆ ಆಗಲಿದೆ.

ಆದಿತ್ಯಾ L1 ನಿಂದ ಸೂರ್ಯನ ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಹೊರ ಕವಚ ಕರೋನಾ ಅಧ್ಯಯನ ಮಾಡಲಾಗುತ್ತದೆ. ಅಧ್ಯಯನ ದಿಂದ ಸೂರ್ಯನಿಂದ ಹೊರ ಬರ್ತಿರುವ ಶಕ್ತಿ ಅಂದಾಜು ತಿಳಿಯುವ ಜೊತೆಗೆ ಜಗತ್ತಿನ ಇನ್ನಷ್ಟು ವಿಸ್ಮಯ ತಿಳಿಯಲು ಸಹಕಾರಿ ಆಗಲಿದೆ

More News