ಸಾಹಿತಿಗಳಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರಿಗೆ ಪರ್ಸನಲ್ ಥ್ರೆಟ್ ಇದೆ ಅವರಿಗೆ ಗನ್ ಮ್ಯಾನ್ ಕೊಡ್ತೇವೆ. ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಹಂತದಲ್ಲಿ ತನಿಖೆ ಮಾಡ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಬೆದರಿಕೆ ಕರೆ ಬರ್ತಿದೆ ಎಂದು ಈ ಹಿಂದೆ ಗೃಹ ಸಚಿವರಿಗೆ ಪತ್ರ ಬರೆದು ಆತಂಕ ತೋಡಿಕೊಂಡ ಕೆಲ ಸಾಹಿತಿಗಳು, ಇಂದು ಹಿರಿಯ ಸಾಹಿತಿ ಮರುಳ ಸಿದ್ದಪ್ಪ ನೇತೃತ್ವದಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವ್ರು, ಸಾಹಿತಿಗಳು ಭೇಟಿಯಾಗಿ ಯಾವ ರೀತಿ ಬೆದರಿಕೆ ಹಾಕ್ತಿದ್ದಾರೆ ಎಂದು ಎಲ್ಲವನ್ನೂ ನಮಗೆ ತಿಳಿಸಿದ್ದಾರೆ. ಇದೊಂದು ಸೈದ್ಧಾಂತಿಕ ವಿಚಾರ.
ಹಿಂದೆ ಗೌರಿ ಲಂಕೇಶ್ ಗೂ ಇದೇ ರೀತಿ ಕರೆ ಬರ್ತಿದ್ವು. ಕಲಬುರ್ಗಿಯವರಿಗೂ ಬರುತ್ತಿದ್ವು. ಹೀಗಾಗಿ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾರಿಗೆ ಪರ್ಸನಲ್ ಥ್ರೆಟ್ ಇದೆ ಗನ್ ಮ್ಯಾನ್ ಕೊಡ್ತೇವೆ. ಅವರಿಂದ ಮಾಹಿತಿ ಪಡೆದು ಸೆಕ್ಯೂರಿಟಿ ಕೊಡ್ತೇವೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ತನಿಖೆ ಮಾಡ್ತೇವೆ. ಇದಕ್ಕೆ ಪ್ರತ್ಯೇಕ ತಂಡವನ್ನ ರಚನೆ ಮಾಡ್ತೇವೆ ಎಂದು ತಿಳಿಸಿದರು.

ಒಂದು ವರ್ಗದ ಜನ ಒಂದು ಸಿದ್ದಾಂತ ನಂಬಿದ್ದಾರೆ. ಸಾಹಿತಿಗಳು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
ಇದನ್ನು ಒಂದು ವರ್ಗದ ಜನ ವಿರೋಧಿಸುವ ಕೆಲಸ ಮಾಡ್ತಿದ್ದಾರೆ. ಸೈದ್ದಾಂತಿಕ ವ್ಯತ್ಯಾಸ ಗಳಿಂದಾಗಿಯೇ ಗೌರಿ ಲಂಕೇಶ್ ಹಾಗೂ ಕಲಬುರ್ಗಿಯವರ ಹತ್ಯೆಗಳಾಗಿದೆ. ಎಲ್ಲ ರೀತಿಯಲ್ಲಿ ಸಾಹಿತಿಗಳ ರಕ್ಷಣೆಗೆ ಸರ್ಕಾರ ಬದ್ದ.
ಈಗಾಗಲೇ ಇಬ್ಬರಿಗೆ ಸೆಕ್ಯುರಿಟಿ ಕೊಟ್ಟಿದ್ಧೆವು. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡ್ತೇವೆ. ಹಿರಿಯ ಅಧಿಕಾರಿಗಳೇ ಈ ಬಗ್ಗೆ ತನಿಖೆ ಮಾಡ್ತಾರೆ ಎಂದು ಮಾಹಿತಿ ನೀಡಿದರು.
ಒಂದಿಬ್ಬರಿಂದ ನಾವು ಸೆಕ್ಯೂರಿಟಿ ವಾಪಸ್ ಪಡೆದಿದ್ದೆವು. ಈಗ ಮತ್ತೆ ಅವರಿಗೆ ಸೆಕ್ಯೂರಿಟಿ ಕೊಡ್ತೇವೆ. ಇದು ಒಳಹಂತದ ಇನ್ವೆಸ್ಟಿಗೇಶನ್ ಇದೆ. ಹಾಗಾಗಿ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡ್ತೇವೆ. ಕಾಂಗ್ರೆಸ್ ಗೆ ಅವರು ಬೆಂಬಲ ಅಂತ ಹೇಳ್ತಿಲ್ಲ. ಸಮಾನತೆಯ ಬಗ್ಗೆ ಸೈದ್ಧಾಂತಿಕವಾಗಿ ಗುರ್ತಿಸಿಕೊಂಡಿರಬಹುದು. ಆದರೆ ಅವರು ಕಚೇರಿಗೆ ಬರಲ್ಲ,ಸಭೆಗಳಲ್ಲಿ ಇರಲ್ಲ. ಕೇವಲ ಸೈದ್ಧಾಂತಿಕವಾಗಿ ಜೊತೆ ಗಿರಬಹುದು ಎಂದರು.
ಗೃಹ ಸಚಿವರ ಭೇಟಿ ಬಳಿಕ ಮಾತನಾಡಿದ ಹಿರಿಯ ಸಾಹಿತಿ ಮರುಳ ಸಿದ್ಧಪ್ಪ, ಯಾರು ಮುಕ್ತವಾಗಿ ಮಾತನಾಡ್ತಾರೆ ಅವರಿಗೆ ಥ್ರೆಟ್ ಇದೆ. ಅವರ ಪ್ಯಾಸಿಸ್ಟ್ ವಿಚಾರ ನಾವು ಖಂಡಿಸ್ತೇವೆ. ಅದಕ್ಕೆ ಅವರು ನಮಗೆ ಬೆದರಿಕೆ ಒಡ್ಡುತ್ತಾರೆ. ಗೌರಿಲಂಕೇಶ್,ಕಲಬುರ್ಗಿ ಹತ್ಯೆಯಲ್ಲೂ ಅದೇ ಆಗಿದೆ. ಇದರ ಹಿಂದೆ ದೊಡ್ಡ ಗುಂಪು ಕೆಲಸ ಮಾಡ್ತಿದೆ. ಆ ಗುಂಪನ್ನ ಸರ್ಕಾರ ಪತ್ತೆ ಹಚ್ಚಬೇಕು. ದೇಶದಲ್ಲಿ ಈ ಗುಂಪು ಅಪಾಯಕಾರಿಯಾಗಿದೆ. ದೇಶಕ್ಕೆ ಎಷ್ಟು ಆತಂಕ ಸೃಷ್ಟಿಸ್ತಾರೆ ಬಯಲಿಗೆಳೆಯಬೇಕು ಎಂದರು. ಮುಂದುವರೆದು ಮಾತನಾಡಿದ ಅವರು, ನಾವು ಯಾವ ಪಕ್ಷದ ಪರ,ವಿರುದ್ಧವಲ್ಲ. ಈ ದೇಶ ಅನೇಕ ಸಂಸ್ಕೃತಿಯನ್ನ ಹೊಂದಿದೆ. ನಮ್ಮ ದೇಶದ ಬಹುತ್ವ ಸಂಸ್ಕೃತಿ ಉಳಿಸಬೇಕು. ಯಾರು ಸಂವಿಧಾನ ವಿರೋಧಿಗಳಿದ್ದಾರೆ ಅವರನ್ನ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.