ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿ ಕೆಲಸಕ್ಕೆ ಲಂಚ ನಿಗದಿ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆ.ಆರ್.ಪೇಟೆಯ ಕೃಷಿ ಅಧಿಕಾರಿಗಳಾದ ಶಿವಪ್ರಸಾದ್, ಗುರುದತ್ ರನ್ನ ವಶಕ್ಕೆ ಪಡೆದುಕೊಂಡು ಆರೋಪದ ಸತ್ಯಾಸತ್ಯತೆ ಕುರಿತು ಚರ್ಚೆ ನಡೆಸಲಾಗ್ತಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯಪಾಲರಿಗೆ ಕೊಟ್ಟ ಲೆಟರ್ ನಲ್ಲಿ ಜೆಡಿಎಸ್ ಹೆಸರಿರೋದು, ಕುಮಾರಸ್ವಾಮಿ ಹೆಸರಿರೋದು ಗೊತ್ತಿದೆ. ಈ ತರದ್ದೆಲ್ಲ ಎಷ್ಟು ನಡೆಸ್ತಾರೋ ನಡೆಸಲಿ ಎಂದರು.
ಮುಂದುವರೆದು ಮಾತನಾಡಿದ ಅವರು, ಕೃಷಿ ಇಲಾಖೆ ಭ್ರಷ್ಟಾಚಾರದ ಆರೋಪ ತನಿಖೆಯಲ್ಲಿ
ಇಬ್ಬರು ಕೃಷಿ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ಇದಕ್ಕೆ ಯಾರು ಕಾರಣ ಹಿನ್ನೆಲೆ ಏನು ಗೊತ್ತಿಲ್ಲ. ಆ ಲೆಟರ್ ನಲ್ಲಿ ಜೆಡಿಎಸ್ ಹೆಸರಿರೋದು, ಕುಮಾರಸ್ವಾಮಿ ಹೆಸರಿರೋದು ನಿಮಗೇ ಗೊತ್ತಿದೆ. ಈ ತರದ್ದೆಲ್ಲ ಎಷ್ಟು ನಡೆಸ್ತಾರೋ ನಡೆಸಲಿ ಎಂದು ವಾಗ್ದಾಳಿ ನಡೆಸಿದರು.
ನೈಸ್ ವಿಚಾರದ ಸಂದರ್ಭದಲ್ಲಿ ಅವರು ಸಿಎಂ ಆಗಿರಲಿಲ್ವಾ? ನೈಸ್ ಯೋಜನೆ ತಂದವರು ಯಾರು? ಸ್ಟಾರ್ಟ್ ಮಾಡಿದವರು ಯಾರು? ಎಂಬುದೂ ಕೂಡ ಚರ್ಚೆಯಾಗಬೇಕಲ್ಲ. ರಾಜ್ಯದಲ್ಲಿ ಬೇರೆ ಎಲ್ಲ ರಸ್ತೆಗಳಿವೆ, ಟೋಲ್ ವಿಷಯಗಳಿವೆ. ಅವೆಲ್ಲವನ್ನೂ ಬಿಟ್ಟು ನೈಸ್ ರೋಡ್ ಮಾತ್ರ ಯಾಕೆ ಹಿಡಿದುಕೊಂಡಿದ್ದಾರೆ..? ನೈಸ್ ವಿಚಾರ ಮಾತ್ರ ಇವರಿಗೆ ಸಾರ್ವಜನಿಕ ಹಿತದೃಷ್ಟಿಯ ವಿಚಾರವಾಯ್ತಾ? ನಮ್ಮ ಕಾಂಗ್ರೆಸ್ ಸರ್ಕಾರ ನೈಸ್ ಪರವಾಗಿ ಇಲ್ಲ. ಸತ್ಯಾಸತ್ಯತೆ ತಿಳಿದು ಮುಂದಿನ ಕ್ರಮಕ್ಕೆ ಮುಂದಾಗ್ತೇವೆಂದು ತಿಳಿಸಿದರು.

ರೈತರ ಪ್ರತಿಭಟನೆಗೆ ನನ್ನ ಬೆಂಬಲ ಇದೆ. ಸಮಸ್ಯೆ ಯನ್ನ ಸರ್ಕಾರದ ಗಮನಕ್ಕೆ ತರ್ತಿದ್ದಾರೆ. ಆದ್ರೆ ಬಿಜೆಪಿ ಪ್ರತಿಭಟನೆಗೆ ಏನೆಂದು ಹೇಳ್ಬೇಕೋ.. ನ್ಯಾಷನಲ್ ಪಾರ್ಟಿ ಅವರದ್ದು ಕನಿಷ್ಠ ತಿಳುವಳಿಕೆ ಇಲ್ವಾ? ನಮ್ಮವರು ಸರಿಯಾದ ದಿಕ್ಕಿನಲ್ಲಿ ವಾದ ಮಂಡಿಸ್ತಿದ್ದಾರೆ. ಅದಕ್ಕೆ ವಾಟರ್‌ಮ್ಯಾನೇಜ್ ಮೆಂಟ್ ತೆಗೆದುಕೊಂಡು ಬಂದಿದೆ.
೧೦ ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ನೀರು ಬಿಟ್ಟವರು ಯಾರು ಬೋರ್ಡ್ ನವರು. ಬಿಜೆಪಿಯ ೨೫ ಸಂಸದರು ಇದ್ದಾರೆ. ರಾಜ್ಯಸಭಾ ಸದಸ್ಯರು ಏನ್ಮಾಡ್ತಾರೆ. ಕೇಂದ್ರದಲ್ಲಿ ಹೋಗಿ ಕೇಳುವುದು ಮಾಡಬೇಕು. ಅದನ್ನ ಬಿಟ್ಟು ಇಲ್ಲಿ ರಾಜಕಾರಣ ಮಾಡ್ತಾರೆ ಎಂದು ಕುಟುಕಿದರು.
ತಮಿಳುನಾಡು ಜೊತೆ ರಾಜಕೀಯ ಕಾರಣಕ್ಕೆ ಸ್ನೇಹ ಇರಬಹುದು. ಆದರೆ ನೀರಿನ ವಿಚಾರದಲ್ಲಿ ನಾವು ಬೆಂಡಾಗಲ್ಲ. ನಾವು ತೊಂದರೆಯಾಗದಂತೆ ನೋಡಿಕೊಳ್ತಿದ್ದೇವೆ. ಮಳೆಯಿಲ್ಲದ ಕಾರಣ ದಿನೇದಿನೇ ನೀರು ಕಡಿಮೆಯಾಗ್ತಿದೆ. ನಾಳೆ ಅಲ್ ಪಾರ್ಟಿ ಮೀಟಿಂಗ್ ಕರೆಯಲಾಗಿದೆ. ಅಲ್ಲಿ ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. ರೈತರ ಸಮಸ್ಯೆ ಮಂಡಿಸುವ ಬಗ್ಗೆ ಮಾಡ್ತೇವೆ ನೀರಿನವಿಚಾರದಲ್ಲಿ ರಾಜಕಾರಣ ಬೇಡ. ರೈತರ ಸಮಸ್ಯೆಗೆ ನಾವು ಕಾಲು ಹಿಂದಿಡಲ್ಲ ಎಂದು ತಿಳಿಸಿದರು.




