Cauvery Water: ಕಾವೇರಿ ನೀರು ಹಂಚಿಕೆ, ಸುಪ್ರೀಂ ಕೋರ್ಟ್ ನಲ್ಲಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಸಲಹೆ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸಿ, ರಾಜ್ಯದ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾವೇರಿ ಹಾಗೂ ಮಹದಾಯಿ ನದಿ ನೀರು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮದ್ಯಂತರ ಅರ್ಜಿ ಸಲ್ಲಿಸದೇ, ರಾಜ್ಯದ ರೈತರಿಗೆ ನೀರು ಬಿಡದೇ ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಹೇಳಿದ್ದೇವೆ. ಆದರೆ, ಅವರು ಅದನ್ನು ಒಪ್ಪಲು ಸಿದ್ದರಿಲ್ಲ. ನೆಲ ಜಲ ವಿಚಾರದಲ್ಲಿ ನಮ್ಮ ರಾಜ್ಯದ ಹಿತರಕ್ಷಣೆ ಮಾಡುವುದ್ರಲ್ಲಿ ನಾವು ಬೆಂಬಲ ಕೊಡುತ್ತಾ, ಅವರು ಮೊದಲ ಹಂತದಲ್ಲಿ ಎಲ್ಲೆಲ್ಲಿ ಎಡವಿದ್ದಾರೆ ಎಂದು ಹೇಳಿದ್ದೇವೆ.

ಸಿಡಬ್ಲ್ಯುಎಂಎ ದಲ್ಲಿ ಸರಿಯಾಗಿ ವಾದ ಮಾಡುವುದರಲ್ಲಿ,
ಸುಪ್ರೀಂ ಕೋರ್ಟ್ ಗೆ ಹೋಗದೆ ಇರುವುದರಲ್ಲಿ ಎಡವಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ ಅವರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲಾ ಎಂದರು.
ತಮಿಳುನಾಡಿಗೆ 10 ಸಾವಿರ ಕ್ಯುಸೆಕ್ಸ್ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲಾ. ನಮ್ಮ ರೈತರಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿ ಒದಗಿಸಿಕೊಂಡಿರುವುದು ಸರಿಯಲ್ಲಾ. ಸುಪ್ರೀಂ ಕೋರ್ಟ್ ನಲ್ಲಿ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟು ನೀರು ಬಿಡದಂತೆ ನೊಡಿಕೊಳ್ಳುವುದು ಬಹಳ ಮುಖ್ಯ ಎಂದರು.
ನಮ್ಮ ಜಲಾಶಯಗಳಲ್ಲಿ ಅವತ್ತು 93 ಟಿಎಂಸಿ ನೀರಿತ್ತು. ಇತ್ತು ಈಗ 7೦ ಟಿಎಂಸಿ ಮಾತ್ರ ನೀರು ಇದೆ.ಇದೇ ರೀತಿ ಮಾಡಿದರೆ, ನಮ್ಮ ರೈತರಿಗೆ ನೀರು ಕೊಡಲು ಅಗುವುದಿಲ್ಲ. ಬರುವಂತವ ಎರಡು ತಿಂಗಳ ನಂತರ ಬೆಂಗಳೂರಿಗೂ ಸಂಕಷ್ಟವಾಗುತ್ತದೆ.


ಇದನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕು .ತಮಿಳುನಾಡಿನ ಲಾಯರ್ ಯಾವ ರೀತಿ ಹೇಳುತ್ತಾರೆ. ಅದೇ ರೀತಿ‌ ಪರಿಣಾಮಕಾರಿಯಾಗಿ ನಮ್ಮ ರಾಜ್ಯದ ನ್ಯಾಯವಾದಿಗಳು ವಾದ ಮಂಡಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. ನೆಲಜಲ ವಿಚಾರದಲ್ಲಿ ರಾಜಕಾರಣ ಮಾಡದೇ. ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆವೆ. ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಏನಾಗುತ್ತದೆಯೋ ಕಾದು ನೋಡೋಣ ಎಂದರು.
ಇನ್ನು ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸದೇ ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಮೊದಲು ಸುಪ್ತೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ನಂತರ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಆಲೋಚಿಸುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.

More News