ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಜಗಳ ಆಡ್ತಿದ್ದವರನ್ನು ಬಿಡಿಸಲು ಹೋದ ಯುವಕನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ಕೆಬಿ ನಗರದಲ್ಲಿ ನಡೆದಿದೆ.
ಕೆಬಿ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರ ಮದ್ಯ ಜಗಳ
ಶುರುವಿಟ್ಟಿದೆ. ಮಾತಿನಿಂದ ಪ್ರಾರಂಭವಾದ ಮನಸ್ಥಾಪ ಹೊಡಿ ಬಡಿ ವರೆಗೂ ಮುಂದಾಗಿದೆ. ಘಟನೆಯನ್ನ ಹತ್ತಿರದಿಂದಲೇ ನೋಡ್ತಿದ್ದ ಹುಲಗೇಶ್ ಖಾನಾಪೂರ್ ಎಂಬ ಯುವಕ ಜಗಳ ಅತಿರೇಕಕ್ಕೆ ಹೋಗದಂತೆ ತಡೆಯಲು ಬಂದಾಗ ದುಷ್ಕರ್ಮಿಗಳು ಆತನಿಗೇ ಚಾಕು ಇರಿದಿದ್ದಾರೆ.
ಜಗಳ ಬಿಡಿಸಲು ಬಂದ ಯುವಕ ಹುಲಗೇಶ್ ಖಾನಾಪೂರ್‌ಗೆ ದುಷ್ಕರ್ಮಿಗಳು ಚಾಕು ಇರಿದ್ದಿದ್ದು,
ಎದೆ ಹಾಗೂ ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಬೆನ್ನಲ್ಲೇ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇನ್ನು ಗಾಯಾಳು ಹುಲಗೇಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿ ಪರಾರಿಯಾದವರ ಬಂಧನಕ್ಕೆ ಬೆಂಡಿಗೇರಿ ಪೊಲೀಸರು ಬಲೆ ಬೀಸಿದ್ದಾರೆ.




