ಆಸ್ಪತ್ರೆಯಲ್ಲೂ ಬೈಟು ಬೆಡ್ ! ಬಾಣಂತಿಯರ ಗೋಳು ಹೇಳತೀರದು: ಆರೋಗ್ಯ ಸಚಿವರೇ ಎಲ್ಲಿದ್ದೀರಾ?

ಮಂಡ್ಯ : ಇದು ಮಂಡ್ಯ ಮಿಮ್ಸ್ ಆಸ್ಪತ್ರೆ. ಇಲ್ಲಿ ಎಲ್ಲಾವೂ ಸ್ಪೆಷಲ್, ಸ್ಪೆಷಲ್ ಟ್ರೀಟಮೆಂಟ್, ಸಾಮಾನ್ಯವಾಗಿ ಹೋಟೆಲಿನಲ್ಲಿ ಬೈಟು ಕಾಫಿ, ಬೈಟು ಟೀ ಕೇಳೋದನ್ನ ನೋಡಿದ್ದೇವೆ,ಆದರೆ, ಆಸ್ಪತ್ರೆಯಲ್ಲಿಯೂ ಬೈಟು ಬೆಡ್ ನಾ…
ಏನಪ್ಪಾ ಇದು ಬೈಟು ಬೆಡ್ ಅಂತೀರಾ? ಇದು ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿನ ಹೆರಿಗೆ ವಾರ್ಡ್ ನ ಅವ್ಯವಸ್ಥೆಗೆ ಹಿಡಿದ ಕನ್ನಡಿ, ಇದು ಮಂಡ್ಯ ಮಿಮ್ಸ್ ಆಸ್ಪತ್ರೆ ಹೆರಿಗೆ ವಾರ್ಡ್ ನ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಹಸುಗೂಸಿನ ಜೊತೆ ಇಕ್ಕಟ್ಟಿನಲ್ಲಿ ಮಲಗಬೇಕಾದ ಸ್ಥಿತಿ ಬಾಣಂತಿಯರದ್ದು.


ಮೂವರು ಬಾಣಂತಿಯರು, ನವಜಾತ ಶಿಶುಗಳಿಗೆ ಇಲ್ಲಿ ಕೊಡೋದೇ ಬೈಟು ಬೆಡ್!, ಅದರಲ್ಲೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಇಲ್ಲ ಅಂದ್ರೆ, ಬಾಣಂತಿ ಮತ್ತು ಶಿಶುವನ್ನು ಕರೆದು ಮನೆಗೆ ಹೋಗಿ ಎನ್ನುವ ಸಿಬ್ಬಂದಿ. ಅಸಲಿಗೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳ ಕೊರೆತೆ ಎದ್ದು ಕಾಣುತ್ತಿದೆ.
ಇಲ್ಲಿ ಬಾಡಂತಿಯರ ವಾರ್ಡ್ ಸಮಸ್ಯೆ ಇದೆ ಎಂದು ಅಲ್ಲಿನ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ, ಇಲ್ಲಿ ವಾರ್ಡ್ ಹಾಗೂ ಬೆಡ್ ಗಳನ್ನು ಹೆಚ್ಚಿಸುವಲ್ಲಿ ಯಾರೂ ಗಮನ ನೀಡುತ್ತಿಲ್ಲ. ನಮ್ಮ ಆರೋಗ್ಯ ಸಚಿವರು ಇಂತಹದರ ಕಡೆ ಗಮನನೇ ಹರಿಸುತ್ತಿಲ್ಲ. ಅವರು ಏನಿದ್ದರೂ ಈಗ ಕೊರೊನಾ ಎಂದು ಕುಳಿತಿದ್ದಾರೆ.

ಕೊರೊನಾದ ಸಮಸ್ಯೆ ಕಡಿಮೆಯಾದರೂ ಕೂಡ ಅವರು ಬೇರೆ ಯಾವುದೇ ವಿಚಾರಗಳಿಗೆ ಗಮನ ನೀಡದೇ ಇರುವುದು ನಮ್ಮ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಸ್ವಚ್ಚತೆ ಇಲ್ಲವೆ ಇಲ್ಲ
ಸರ್ಕಾರಿ ಆಸ್ಪತ್ರೆ ಎಂದರೆ ಜನರು ಮೂಗು ಮುರಿಯುವುದು ಏಕೆ ಎನ್ನುವುದರ ಬಗ್ಗೆ ನಿಜವಾದ ಚಿತ್ರಣ ಇಲ್ಲಿದೆ. ಇಲ್ಲಿ ಯಾವುದೇ ರೀತಿಯ ಸ್ವಚ್ಚತೆಗೆ ಆದ್ಯತೆ ನೀಡಿಲ್ಲ. ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬಾಣಂತಿಯರು ಹಾಗೂ ಅವರ ಜತೆ ಬರುವವರು ದಿನ ಕಳೆಯಬೇಕಾಗಿದೆ. ಜತೆಯಲ್ಲಿ ಕೊವಿಡ್ ನ ಯಾವುದೇ ನಿಯಮಗಳನ್ನು ಇಲ್ಲಿ ಪಾಲಿಸುತ್ತಿಲ್ಲ,
ಹೆರಿಗೆ ವಾರ್ಡ್ ನಲ್ಲಿ ಇಲ್ಲಿ ಹತ್ತಾರು ಜನರು ಒಟ್ಟಿಗೆ ಕುಳಿತುಕೊಂಡು ಬಾಣಂತಿಯರ ಆರೋಗ್ಯ ವಿಚಾರಿಸುವ ಕೆಲಸ ಮಾಡಬೇಕಾಗಿದೆ. ಯಾವುದೇ ರೀತಿಯ ಶಿಸ್ತನ್ನು ಇಲ್ಲಿ ಆಡಳಿತ ಮಂಡಳಿ ಮಾಡುತ್ತಿಲ್ಲ. ಇದರಿಂದ ಆಸ್ಪತ್ರೆಯ ಶೌಚಾಲಯಗಳ ಸಮಸ್ಯೆ ಹೇಳತೀರದು. ಇದು ಸರ್ಕಾರಿ ಆಸ್ಪತ್ರೆಯೋ ಅಥವಾ ಇನ್ನೇನು ಅಂತಾ ಕೇಳುವ ಪರಿಸ್ಥಿತಿ ರೋಗಿಗಳದ್ದಾಗಿದೆ.


ಆಸ್ಪತ್ರೆ ಅವ್ಯವಸ್ಥೆಯನ್ನ ಹೇಳೋರೂ ಇಲ್ಲ, ಕೇಳೋರೂ ಇಲ್ಲ. ಹೆರಿಗೆ ವಾರ್ಡ್ ಹೇಗಿರಬೇಕು ಎಂಬ ಕನಿಷ್ಠ ಜ್ಞಾನವೂ ಸಿಬ್ಬಂದಿ, ಮುಖ್ಯಸ್ಥರಿಗೆ ಇಲ್ಲ. ಜನಪ್ರತಿನಿಧಿಗಳಿಗಂತೂ ಈ ಬಗ್ಗೆ ಚಿಂತೆಯೇ ಇಲ್ಲ. ಆರೋಗ್ಯ ಸಚಿವರೇ ಇತ್ತ ಗಮನಹರಿಸಿ, ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿಯನ್ನ ಒಮ್ಮೆ ಪರಿಶೀಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಬೇಕು.

More News