ಬೆಂಗಳೂರು : ಚಂದ್ರಯಾನ -3 ಯೋಜನೆಯ ಸಂಪೂರ್ಣವಾಗಿ ಯಶಸ್ಸು ಕಂಡಿದೆ. ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಹೆಜ್ಜೆ ಇಡುವ ಮೂಲಕ ಭಾರತ ದೇಶದ ವಿಜ್ಞಾನಿಗಳು ಅಪ್ರತಿಮ ಸಾಧನೆಗೈದಿದ್ದಾರೆ.
ಈ ಸಂದರ್ಭದಲ್ಲಿ ನಟ ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದು, ಚಂದ್ರಯಾನ ಯೋಜನೆಯ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ. ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೋ ? ಎಂದು ಪ್ರಶ್ನಿಸಿದ್ದಾರೆ.
Happy to see historic moment of #Chandrayaan3’s landing on the moon—who gets credit: our scientists or ‘Lord’ Tirupathi?
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 23, 2023
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ 'ಲಾರ್ಡ್' ತಿರುಪತಿಗೆ?
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರಶ್ನಿ ಕೇಳಿದ ಅವರು, ಚಂದ್ರಯಾನ – 3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ, ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೆ ? ಎಂದು ಪ್ರಶ್ನಿಸಿದ್ದಾರೆ.
ಲಾರ್ಡ್ ಪದಕ್ಕೆ ಆಶ್ಚರ್ಯಕರ ಚಿಹ್ನೆಯನ್ನು ಬಳಸಿ, ತಮ್ಮ ಆಶ್ಚರ್ಯ ಮತ್ತು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ -3 ನೌಕೆಯನ್ನು ಜುಲೈ 14 ರಂದು ಉಡಾವಣೆ ಮಾಡಿತ್ತು. ನಿನ್ನೆಯಷ್ಟೇ ಲ್ಯಾಂಡ್ ರೋವರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿತ್ತು. ಇದಕ್ಕೂ ನೌಕೆ ಉಡಾವಣೆಗೂ ಒಂದು ದಿನ ಮುಂಚೆ ಯಶಸ್ಸಿಗಾಗಿ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ನಟ ಚೇತನ್ ಅಹಿಂಸಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.




