HUBBALLI: ವರದಕ್ಷಿಣೆ ಆಸೆಗಾಗಿ ಹೆಂಡತಿಯ ಕುತ್ತಿಗೆಗೆ ಚಾಕು ಇರಿದ ಗಂಡ; ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಇವರಿಬ್ಬರು ಕಳೆದ 17 ವರ್ಷಗಳ ಹಿಂದೆ ಮದುಯಾಗಿರುತ್ತಾರೆ. ಆದ್ರೆ ಪಾಪಿ ಗಂಡ ವರದಕ್ಷಿಣೆ ಆಸೆಗಾಗಿ ಹೆಂಡಿತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈಗ ಆ ಮಹಿಳೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾಳೆ. ಅಷ್ಟಕ್ಕೂ ಆ ಭೂಪ ಗಂಡ ಪೊಲೀಸರ ಮುಂದೆ ಹೆಂಡ್ತಿಗೆ ಚಾಕು ಹಾಕಿದ್ದಾನೆ.

ಹಳೇ ಹುಬ್ಬಳ್ಳಿಯ ಶ್ರೀರಾಮ ನಗರದ ನಿವಾಸಿ ಮಂಜುನಾಥ ಬೆಂಡಿಗೇರಿ ಎಂಬಾತನೆ, ತನ್ನ ಹೆಂಡತಿ ಸವಿತಾ ಬೆಂಡಿಗೇರಿ ಕುತ್ತಿಗೆಗೆ 112 ಪೊಲೀಸರ ಎದುರೆ ಚಾಕು ಇರಿದಿದ್ದಾನೆ. ಎಸ್…. ಮಂಜುನಾಥ ಮತ್ತು ಸವಿತಾ 17 ವರ್ಷಗಳ ಹಿಂದೆ ಮದುವೆಯಾಗಿರುತ್ತಾರೆ. ಇಬ್ಬರು ಮಕ್ಕಳು ಕೂಡ ಇದ್ದಾರೆ. ಸುಮಾರು ವರ್ಷಗಳಿಂದ ಮಂಜುನಾಥ ತನ್ನ ಹೆಂಡತಿ ಸವಿತಾಗೆ ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಕಿರುಕುಳ ಕೊಡುತ್ತಿದ್ದನಂತೆ. ಅಷ್ಟೇ ಅಲ್ದೆ ಸವಿತಾ ತವರು ಮನೆಯಿಂದ ಮಂಜುನಾಥನಿಗೆ ಒಂದು ವಾಹನವನ್ನು ಕೂಡ ಕೊಡಸಿದ್ದರಂತೆ. ಇಷ್ಟಾದ್ರು ಕೂಡ ಮಂಜುನಾಥ ತನ್ನ ಹೆಂಡತಿ ಸವಿತಾಗೆ ಇನ್ನೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ದಿನಂಪ್ರತಿ ಕಿರುಕುಳ ಕೊಡುತ್ತಿದ್ದನಂತೆ.

ಇನ್ನು ಮನನೊಂದ ಸವಿತಾ ತನ್ನ ತಂದೆಯನ್ನು ಕರೆದುಕೊಂಡು ಮಹಿಳಾ ಪೊಲೀಸ್ ಠಾಣೆಗೆ ಹೋಗಿ ತನಗೆ ಆಗುವ ಅನ್ಯಾಯದ ಬಗ್ಗೆ ತಿಳಿಸಿದ್ದಾಳೆ. ಅಲ್ಲಿನ ಪೊಲೀಸರು ಕೂಡ ಮಂಜುನಾಥನನ್ನು ಕರೆಯಿಸಿ ಬುದ್ದಿವಾದ ಹೇಳಿ ಕಳಸಿದ್ದಾರೆ. ಆದ್ರೆ ಆತ ಮಾಡಿದ್ದು, ನನ್ನ ಪೊಲೀಸ್ ಠಾಣೆಗೆ ಕರಿಸಿದಿಯಾ ಎಂದು ಕೋಪಗೊಂಡು ಹೆಂಡತಿ ಜೊತೆಯಲ್ಲೆ ಕೈಯಲ್ಲಿ ಚಾಕು ಹಿಡಿದುಕೊಂಡು ಜಗಳ ತಗದಿದ್ದಾನೆ. ಮಕ್ಕಳು ಸೇರಿ ಸವಿತಾ ಕುಟುಂಬದವರು 112 ಗೆ ಕರೆ ಮಾಡಿ‌ ಪೊಲೀಸರನ್ನು ಕರೆಸಿದ್ದಾರೆ. ಆದ್ರೆ ಮಂಜುನಾಥ ಪೊಲೀಸರ ಮುಂದೆ ತನ್ನ ಹೆಂಡತಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಸವಿತಾ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇನ್ನು ಒಂದು ಕಡೆ ಹೆಂಡತಿ ಸವಿತಾ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಮಂಜುನಾಥ ಜೈಲುವಾಸಿಯಾಗಿದ್ದಾನೆ. ಈ ಗಂಡ ಹೆಂಡರ ನಡುವೆ ಇಬ್ಬರು ಮಕ್ಕಳು ಬೀದಿಪಾಲಾಗಿದ್ದಾರೆ.

More News