ಕಾವೇರಿ ನದಿ ನೀರು ತಮಿಳು ನಾಡಿಗೆ ಬಿಡುಗಡೆ ವಿಚಾರದ ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ಅಷ್ಟರೊಳಗೆ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿದೆ.
CWMA ಗೆ ವಾಸ್ತವ ವರದಿ ನೀಡಲು ಸೂಚಿಸಿರುವ ಸುಪ್ರೀಂಕೋರ್ಟ್, 15 ದಿನಗಳ ಕಾಲ, ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಹರಿಸಿದೆಯಾ ಕರ್ನಾಟಕ ಎಂದು ಮಾಹಿತಿ ಪಡೆಯಬೇಕಿದೆ ಎಂದ ತಿಳಿಸಿದೆ.
ಇನ್ನು ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ನಡೆದ ವಿಚಾರಣೆ ಕುರಿತು ಮಾತನಾಡಿದ
ಕೃಷಿ ಸಚಿವ ಚಲುವರಾಯಸ್ವಾಮಿ, ಎಲ್ಲಾ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳೋಕೆ ಆಗಲ್ಲ ಅದಕ್ಕೆ ಸುಮ್ಮನೆ ಇದ್ದೀವಿ. ಕರ್ನಾಟಕ ಕಾವೇರಿ ವಿಚಾರದಲ್ಲಿ ಹೆಜ್ಜೆ ಇಟ್ಟಿದ್ದೀವಿ. ರೈತರ ರಕ್ಷಣೆ ಮಾಡುವ ಕೆಲಸ ಆಯ್ತು. ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ತೀರ್ಮಾನ ಮಾಡೋಕೆ ಬರಲ್ಲ. ವಾಟರ್ ಬೋರ್ಡ್ ಕಮಿಟಿ ೧೫ ಸಾವಿರ ನೀರು ಬಿಡೋಕೆ ವಾದ ಮಾಡಿದ್ರು. ಆಗ ನಮ್ಮಲ್ಲಿ ಸಮರ್ಥವಾಗಿ ವಾದ ಮಾಡಿದಕ್ಕೆ ೧೦ ಸಾವಿರ ಕ್ಯೂಸೆಕ್ಸ್ ಬಂದು ನಿಂತಿತು. ಆಗ ತಮಿಳುನಾಡಿನವರು ಹೊರಹೋಗಿ ಸುಪ್ರೀಂ ಅರ್ಜಿ ಹಾಕಿದ್ದಾರೆ. ಅಧಿಕಾರಿಗಳು,ನಾವು ಯಾರು ಸಹ ನೆಗಲೆಟ್ ಮಾಡಿಲ್ಲ. ಸಿಎಂ ನಾವು ಎಲ್ಲರು ಗಂಭೀರವಾಗಿ ತೆಗೆದುಕೊಂಡಿದ್ದೀವಿ.ಸರ್ವ ಪಕ್ಷ ಸಭೆಯಲ್ಲಿ ಎಲ್ಲರೂ ಸಲಹೆ ನೀಡಿದ್ರು. ಪ್ರಧಾನಿ ಮೋದಿ ಭೇಟಿಗೆ ಸರ್ವ ಪಕ್ಷ ನಿಯೋಗ ಹೋಗಲು ತೀರ್ಮಾನ ಮಾಡಿದ್ದೀವಿ. ಯಾವಾಗ ಹೋಗ್ಬೇಕೆಂದು ಸಿಎಂ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.

ಕಾವೇರಿ ನೀರು ಸಮಸ್ಯೆಯನ್ನು ರಾಜ್ಯ ಸರ್ಕಾರಗಳೇ ಬಗೆಹರಿಸಿಕೊಳ್ಳಬೇಕೆಂಬ ಕೇಂದ್ರ ಸಚಿವರ ಸಲಹೆ ವಿಚಾರ
ದ ಕುರಿತು ಮಾತನಾಡಿದ ಅವರು, ಕೇಂದ್ರ ಸಚಿವರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ. ಕಾವೇರಿ ವಿಚಾರ ನಮ್ಮ ರಾಜ್ಯದಲ್ಲಿ ಇದ್ರೆ ನಾವೇ ಬಗೆಹರಿಸಿಕೊಸಿಕೊಳ್ತಾ ಇದ್ವಿ. ಇದು ಅಂತರಾಜ್ಯ ನೀರಾವರಿ ಸಮಸ್ಯೆ. ನೀರು ಬಿಡೋದು ಕಾವೇರಿ ನಿರ್ವಹಣೆ ಮಂಡಳಿ. ಅಷ್ಟು ಕೇಂದ್ರ ಸಚಿವರಿಗೆ ತಿಳಿದಿಲ್ಲ ಅಂದ್ರೆ ನಾನು ಎನು ಮಾಡೋಕೆ ಆಗುತ್ತೆ..? ಐದು ವರ್ಷದಿಂದ ಕೇಂದ್ರದಲ್ಲಿ ಅವರೇ ಇದ್ದಾರೆ.
೨೦೧೮ ರಲ್ಲಿ ಆದೇಶ ಬಂದಿದೆ. ಮಳೆ ಬಂದಾಗ ಯಾವ ರೀತಿ ಹಂಚಿಕೆ ಮಾಡಬೇಕು ಅಂತ ಹೇಳುಬೇಕು ಅಲ್ವ..? ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ರೈತರ ರಕ್ಷಣೆ ಮಾಡುವ ಕೆಲಸ ಮಾಡಿಲ್ಲ ಎಂದು ದೂರಿದರು.

ಬರಗಾಲ ಘೋಷಣೆ ವಿಚಾರದ ಕುರಿತು ಮಾತನಾಡಿದ ಅವರು, ಬರಗಾಲ ಘೋಷಣೆಗೆ ಗೈಡ್ ಲೈನ್ಸ್ ಇದೆ.
ಬರದ ಬಗ್ಗೆ ನಮಗೆ ಸಂಪೂರ್ಣ ಮಾಹಿತಿಯಿದೆ. ಆದರೆ ಗೈಡ್ ಲೈನ್ಸ್ ಅಡ್ಡ ಬರ್ತಿವೆ. ೧೦ ಕೆಜಿ ಅಕ್ಕಿ ಕೊಡ್ತಿದ್ದೇವೆ,೨೦೦೦ ಹಣ ಕೊಡ್ತಿದ್ದೇವೆ. ಇದೆಲ್ಲವೂ ರೈತರಿಗೆ ಸಿಗುತ್ತೆ,ಅನುಕೂಲವಾಗುತ್ತೆ. ನಾವು ಗೈಡ್ ಲೈನ್ಸ್ ಬಿಟ್ಟು ಬರಘೋಷಣೆ ಮಾಡಲ್ಲ. ನಾವು ೧೦೦ ಕ್ಕೂ ಹೆಚ್ಚು ತಾಲೂಕು ಬರ ಘೋಷಿಸ್ತೇವೆ. ಮೋಡಬಿತ್ತನೆ ಬಗ್ಗೆ ಚಿಂತನೆಯಿಲ್ಲ. ಅದರಿಂದ ಹಿಂದೆ ಯಾವ ಪ್ರಯೋಜವಾಗಿಲ್ಲ ಎಂದರು.
ಇನ್ನು ಕಳಪೆ ಬಿತ್ತನೆ ತಡೆಯಲು ಕ್ರಮ ವಿಚಾರದ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ,
ಕಳಪೆ ಬಿತ್ತನೆ ಬೀಜದ ಬಗ್ಗೆ ಯಾವುದೇ ದೂರು ಬಂದಿಲ್ಲ. ಎರಡು ಮೂರು ಕಡೆ ಬಂದಿದೆ. ದೂರು ದಾಖಲು ಮಾಡಿದ್ದೇವೆ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.




