SECRET MEETING: ಶೀಘ್ರದಲ್ಲೇ ಎಸ್ ಟಿ ಎಸ್ ಮತ್ತು ಹೆಬ್ಬಾರ್ ಶಾಸಕರ ಸ್ಥಾನಕ್ಕೆ ರಾಜೀನಾಮೆ..?: ರಹಸ್ಯವಾಗಿ ಸಿದ್ದು ಭೇಟಿಯಾಗಿ ಇಂಗಿತ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆ ಆಪರೇಷನ್ ಹಸ್ತದ ಸುದ್ದಿ ಭಾರೀ ಸದ್ದು ಮಾಡ್ತಿದೆ. ನಾವ್ ಖುಷಿಯಾಗಿದ್ದೀವಿ.. ಪಕ್ಷ ಬಿಡೋ ಮಾತೇ ಇಲ್ಲ ಎಂದು ಬಹಿರಂಗವಾಗಿ ಘೋಷಿಸೋ ಕೇಸರಿ ನಾಯಕರು ರಾತ್ರೋ ರಾತ್ರಿ “ಕೈ” ಕೈ ಮಿಲಾಯಿಸ್ತಿದ್ದಾರೆ.

ಶುಕ್ರವಾರ ರಾತ್ರಿ ಸಿಎಂ ಸಿದ್ದರಾಮಯ್ಯ ರನ್ನು ಎಸ್ ಟಿ ಸೋಮಶೇಖರ್ ಮತ್ತು ಹೆಬ್ಬಾರ್ ಭೇಟಿಯಾಗಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಮತ್ತು ಪ್ರಮುಖರು ನಮ್ಮನ್ನು ಅನುಮಾನದಿಂದಲೇ ಕಾಣುತ್ತಿದ್ದಾರೆ. ಪದೇ ಪದೇ ಬಿಜೆಪಿಯ ಹಿರಿಯ ನಾಯಕರು ನಮ್ಮನ್ನು ಕರೆಸಿ ಪಕ್ಷ‌ ಬಿಡ್ತೀರಿ ಎಂದು ಸಂಶಯದಿಂದಲೇ ಪ್ರಶ್ನಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ‌. ಎಲ್ಲರಿಗೂ ಸಮಜಾಯಿಸಿ,ಉತ್ತರ ನೀಡಿ ಸಾಕಾಗಿದೆ. ಎಲ್ಲರಿಂದ ತಪ್ಪಿಸಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇತ್ತ ಶಾಸಕರನ್ನು ಉಳಿಸಿಕೊಳ್ಳಲು ಬಿಜೆಪಿ ನಾಯಕರು ಸರಣಿ ಸಭೆಗಳ‌್ನು ನಡೆಸ್ತಿದ್ದಾರೆ. ಆದ್ರೂ ಯಾವ ಪ್ರಯೋಜನವಾಗಿಲ್ಲ ಎಂಬ ಮಾತು ಕೇಳಿಬಂದಿದೆ. ಬಿಜೆಪಿ ಅತಿರೇಕದ ಏಕ ಚಕ್ರಾಧಿಪತ್ಯದ ನಿಲುವು, ನಿರ್ಲಕ್ಷ್ಯ,
ಶಿಸ್ತಿಗೆ ಬೇಸತ್ತಿರುವ ಮೂಲ ಕಾಂಗ್ರೆಸಿಗರು ವಾಪಸ್ ಕೈ ಸೇರೋ ತವಕದಲ್ಲಿದ್ದಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಿಂದ ಕೇಳಿ ಬಂದಿದೆ.

More News