ಹಾವೇರಿ: ಸಾಲಬಾದೆ ತಾಳದೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾ. ಶಿಡೇನೂರು ಗ್ರಾಮದಲ್ಲಿ ನಡೆದಿದೆ.
ನಾಗೇಶಪ್ಪ ಕೊಡಗದ್ದಿ (50 ವರ್ಷ) ಆತ್ಮಹತ್ಯೆ ಮಾಡಿಕೊಂಡ ಅನ್ನದಾತ. ಮೃತ ರೈತ ನಾಗೇಶಪ್ಪ ಕೆನರಾ ಬ್ಯಾಂಕ್ ನಲ್ಲಿ 4 ಲಕ್ಷ, ಯೂನಿಯನ್ ಬ್ಯಾಂಕ್ ನಲ್ಲಿ 3.80 ಲಕ್ಷ ಸಾಲ ಮಾಡಿದ್ದಾರೆ. ಸಾಲ ಮಾಡಿ ತಂದ ಹಣದಲ್ಲಿ ಜಮೀನಲ್ಲಿ ಫಸಲನ್ನ ಹಾಕಿದ್ದಾರೆ. ಆದ್ರೆ ಕಳೆದ ಬಾರಿ ಮಳೆ ಹೆಚ್ಚಾಗಿ ಜಮೀನಿನ ತುಂಬಾ ಹಾಕಿದ ಬೆಳೆ ನಾಶವಾಗಿದೆ. ಈ ವರ್ಷ ಮಳೆ ಬಾರದೆ ಬೆಳೆ ಒಣಗಿವೆ.
ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದು ಮನೆಯ ದನದ ಕೊಟ್ಟಿಗೆಯಲ್ಲಿ ರೈತ ನೇಣಿಗೆ ಶರಣಾಗಿದ್ದು, ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.