Wedding: ತಾಳಿ ಕಟ್ಟೋ ಶುಭ ವೇಳೆ ಪ್ರಿಯಕರನನ್ನು ನೆನೆದು ಹಸೆ‌ಮಣೆಯಿಂದ ಎದ್ದು ಹೊರಟ ಯುವತಿ

ತುಮಕೂರು: ಬೇರೆ ಹುಡುಗನನ್ನ ಪ್ರೀತಿಸುತ್ತಿದ್ದೇನೆ ಹೀಗಾಗಿ ಯಾರೊಂದಿಗೋ ಮದುವೆ ಆಗೋದಕ್ಕೆ ಸಾಧ್ಯವಿಲ್ಲ ಎಂದು ಹಸೆಮಣೆಯಿಂದ ಯುವತಿ ಎದ್ದು ಹೊರಟ
ಘಟನೆ ತುಮಕೂರು ಜಿಲ್ಲೆ‌, ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಮದುವೆ ನಿರಾಕರಿಸಿದ ವಧು. ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ರಾತ್ರಿ ರಿಸೆಪ್ಷನ್ ನಡೆಯುತ್ತಿತ್ತು. ರಾತ್ರಿ ಮದುವೆಗೆ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದ ದಿವ್ಯಾ, ಬೆಳಗ್ಗೆ ಮುಹೂರ್ತಕ್ಕೆ ಸಮಯ ಬರುತ್ತಿದ್ದಂತೆ ಮದುವೆ ಬೇಡ ಎಂದು ಅರ್ಧಕ್ಕೆ ಮೊಟಕುಗೊಳಿಸಿ ಎದ್ದು ನಡೆಸಿದ್ದಾರೆ.

ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್.
ಜೊತೆಗೆ ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾಗೆ ಮದುವೆ ನಿಶ್ಚಿತ ಆಗಿದೆ. ತಂದೆ ತಾಯಿ ಖುಷಿಗೆ ಮದ್ವೆ ಒಪ್ಪಿಕೊಂಡ ಯುವತಿಗೆ ಪ್ರಿಯಕರನನ್ನು ಮರೆಯಲಾರದೆ ಮದುವೆಯಿಂದ ಎದ್ದು ನಡೆದಿದ್ದಾರೆ.

ಇನ್ನು ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಶುರುವಾಗಿದೆ. ಎರಡು ಮನೆ ಕಡೆಯವರಿಂದ ಮಾತಿನ ಚಕಮಕಿ ನಡೆದಿದ್ದು, ಕೊಳಾಲ‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More News

You cannot copy content of this page