ಹುಬ್ಬಳ್ಳಿ: ಕಳೆದ ಹತ್ತುವರ್ಷಗಳಿಂದ ಮಾಧ್ಯಮದಿಂದ ವಿಮುಖರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರಕರ್ತರು ಎಂದರೆ ಭಯ ಏಕೆ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಇಂದು ಎಂ.ಎಂ.ಜೋಷಿ ನೇತ್ರ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಎನ್.ಎಂ.ಆರ್ ಸ್ಕ್ಯಾನಿಂಗ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಚಿವರಾದ ಸಂತೋಷ್ ಲಾಡ್ ಪತ್ರಕರ್ತರೊಂದಿಗೆ ಮಾತನಾಡಿದರು.
ಕೋವಿಡ್ ಸಂಧರ್ಭದಲ್ಲಿ 30 ಸಾವಿರ ಕೋಟಿ ಹಣ ಸಪ್ರೇಟ್ ಟ್ರಸ್ಟ್ ಮೂಲಕ ಕೇಂದ್ರ ಸರ್ಕಾರ ದುಡ್ಡು ಪಡೆದುಕೊಂಡಿದೆ. ಅದನ್ನು ಪ್ರಧಾನ ಮಂತ್ರಿ ರಿಲೀಫ್ ಫೆಂಡ್ ಅಂತ ತಗೋ ಬಹುದಿತ್ತಲ್ಲ. ಇವರ ಬ್ರಷ್ಟಾಚಾರದ ಆಟಗಳಿಗೆ ಇಂತಹ ಸಾಕಷ್ಟು ಉದಾಹರಣೆಗಳಿವೆ. ಲೋಕಸಭೆ ಚುನಾವಣೆ ಬಂದಿದೆ ನಮ್ಮ ಸರ್ಕಾರದ ಹೆಸರು ಕೆಡಿಸಬೇಕು ಅಂತ ಸಾಕ್ಷಿ ಇಲ್ಲದೇ ಬಿಜೆಪಿಯವರು ಏನೇನೋ ಮಾತನಾಡುತ್ತಿದ್ದಾರೆ. ಅವರ ಅವಧಿಯಲ್ಲಿನ ಅಭಿವೃದ್ಧಿಯ ರಿಪೋರ್ಟ್ ಬಗ್ಗೆ ಕೇಳಿ ಉತ್ತರ ಕೊಡೋದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಪ್ರಧಾನ ಮಂತ್ರಿ ಯಾಕೆ ನೇರವಾಗಿ ಬಂದು ಪ್ರೆಸ್ ಮೀಟ್ ಮಾಡಲ್ಲ ಅನ್ನೋದೇ ನಮ್ಮ ಪ್ರಶ್ನೆ. ಯಾಕೆ 9 ವರ್ಷದಿಂದ ಪ್ರೆಸ್ ಮೀಟ್ ಮಾಡಿಲ್ಲ ಅಂತ ನೀವು ಕೂಡ ಪ್ರಶ್ನೆ ಮಾಡಿ. ನಿಮ್ಮ ರಿಟೈರ್ಡ್ ಆದ ಚೀಫ್ ಜೆಸ್ಟಿಸ್ ಗಳು ಈಗ ಎಲ್ಲಿದ್ದಾರೆ? ಅವರು ನಿಮ್ಮ ಕೃಪಾಕಟಾಕ್ಷದಲ್ಲಿ ಸರ್ಕಾರದ ಬೇರೆ ಬೇರೆ ಹುದ್ದೆಗಳಲ್ಲಿದ್ದಾರೆ. ನಾವು ಅದನ್ನು ಹೇಳಬಹುದಲ್ಲವೇ? ರಾಜಕೀಯ ಆರೋಪ ಪ್ರತ್ಯಾರೋಪ ಹೊರತು ಪಡಿಸಿ ಬಡವರ ಪರವಾಗಿ ಬಿಜೆಪಿಯವರು ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ, ನಾವು ಮಾಡಿದ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿದ್ದಾರೆ. ಚುನಾವಣೆ ಬಂದಿದೆ ಮತ್ತೆ ಪ್ರಚಾರ ಗಿಟ್ಟಿಸಿಕೊಳ್ಳಲು ಅಣಿಯಾಗಿದ್ದಾರೆ.
5 ಸಾವಿರ ಕೋಟಿ ಹಣ ವ್ಯಯಿಸಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿಕೊಂಡ್ರೆ ಮಹಾನ್ ವ್ಯಕ್ತಿಯಂತೆ ಕಂಡೆ ಕಾಣ್ತಾರೆ ಎಂದು ಸಚಿವರಾದ ಸಂತೋಷ್ ಲಾಡ್ ಮಾರ್ಮಿಕವಾಗಿ ಲೇವಡಿ ಮಾಡಿದರು.