Celebrities Own Land On The Moon: ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಸೆಲೆಬ್ರಿಟಿಗಳು..

ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಚಂದ್ರನ ಅಂಗಳದಲ್ಲಿ ಜಾಗ ಖರೀದಿ ಮಾಡಿರುವವರ ಕುರಿತು ಚರ್ಚೆಯಾಗುತ್ತಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕಳುಹಿಸಿರುವ ‘ಚಂದ್ರಯಾನ 3’ ಉಪಗ್ರಹ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಈಗ ಪ್ರಪಂಚದಾದ್ಯಂತ ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆಗಿರುವ ಭಾರತದ ವಿಕ್ರಮ್ ಲ್ಯಾಂಡರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಸ್ರೋ ವಿಜ್ಞಾನಿಗಳು ಪ್ರಗ್ಯಾನ್ ರೋವರ್‌ ಮೂಲಕ ಬಾಹ್ಯಾಕಾಶದ ರೋಚಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ವಿಕ್ರಮ್‌ ಲ್ಯಾಂಡರ್‌ನಿಂದ ಕೆಳಗಿಳಿದಿರುವ ಪ್ರಗ್ಯಾನ್ ರೋವರ್ ತನ್ನ ಅಧ್ಯಯನ ಮುಂದುವರಿಸಿದೆ.

ಇದರೊಂದಿಗೆ 2019ರಲ್ಲೇ ಲ್ಯಾಂಡ್‌ ಆಗಿರುವ ಚೀನಾದ ಚಾಂಗೀ-4 ಲ್ಯಾಂಡರ್‌ ಸಹ ಚಂದ್ರನನ್ನು ಅಧ್ಯಯನ ಮಾಡುತ್ತಿದೆ. ಈ ಸುಸಂದರ್ಭದಲ್ಲಿ ಚಂದ್ರನ ಮೇಲೆ ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿರುವ ಸುದ್ದಿ ಮುನ್ನಲೆಗೆ ಬರುತ್ತಿದೆ.
ಚಂದ್ರನ ಮೇಲೆ ಶಾರುಖ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಸೇರಿ ಅನೇಕ ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ. ಆದರೆ ಈ ಜಾಗದ ಮೇಲೆ ಅವರಿಗೆ ಹಕ್ಕು ಸಾಧಿಸೋಕೆ ಬರುವುದಿಲ್ಲ ಎನ್ನಲಾಗಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಚಂದ್ರನ ಮೇಲೂ ತಮ್ಮ ಆಸ್ತಿ ಹೊಂದಿದ್ದಾರೆ. ಶಾರುಖ್ ಖಾನ್ ಅವರ ಆಸ್ಟ್ರೇಲಿಯಾದ ಮಹಿಳಾ ಅಭಿಮಾನಿ ಪ್ರತಿ ವರ್ಷ ಅವರ ಹುಟ್ಟು ಹಬ್ಬದಂದು ಚಂದ್ರನ ಮೇಲೆ ಜಾಗ ಖರೀದಿಸಿ ನೀಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಶಾರುಖ್ ಖಾನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಚಂದ್ರನ ಮೇಲೆ ‘ಸೀ ಆಫ್ ಟ್ರಾನ್​ಕ್ವಾಲಿ’ ಹೆಸರಿನ ಪ್ರದೇಶದಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ.

ಇನ್ನು ಬಾಲಿವುಡ್​ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ‘ಮರ್ರೆ ಮಾಸ್ಕೋವಿ (ಸೀ ಆಫ್ ಮಾಸ್ಕೋವಿ)’ ಎಂಬಲ್ಲಿ ಜಾಗ ಹೊಂದಿದ್ದರು. ಇವರು ಇದಕ್ಕಾಗಿ ಸುಮಾರು 55 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇಂಜಿನಿಯರಿಂಗ್ ಪದವಿಧರರಾದ ಇವರು ಬಾಹ್ಯಾಕಾಶದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು.
ಇನ್ನು ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತ ಅವರು ಚಂದ್ರನ ಮೇಲೆ ಆಸ್ತಿ ಹೊಂದಿದ್ದಾರೆ. ಇವರ ಅಭಿಮಾನಿಯೊಬ್ಬರು ಈ ಜಾಗವನ್ನು ಖರೀದಿಸಿ ನೀಡಿದ್ದಾರೆ ಎನ್ನಲಾಗಿದೆ.

ಮತ್ತೊಬ್ಬ ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಬಿಗ್ ಬಾಸ್ ಹಿಂದಿಯ 16ನೇ ಸೀಸನ್​’ನಿಂದ ಬಿಗ್ ಬಾಸ್​​ ಮನೆಯಿಂದ ಹೊರ ಬಂದ ಬಳಿಕ ಅವರಿಗೆ ಅಭಿಮಾನಿಯೊಬ್ಬರು ಚಂದ್ರನ ಮೇಲಿನ ಜಾಗ ಖರೀದಿಸಿ ಇವರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

More News