ಭೂಮಿಯಿಂದ ಎಲ್ಲರನ್ನೂ ಬೆರಗುಗೊಳಿಸುವ
ಚಂದಿರನ ಅಂಗಳದಲ್ಲಿ ಪರ್ಯಟನೆ ಆರಂಭಿಸಿರುವ ಭಾರತೀಯ ವಿಕ್ರಂ ಅಚ್ಚರಿಯ ಅನ್ವೇಷಣೆ ಮುಂದುವರೆಸಿದೆ. ಚಂದಿನ ಮೇಲೆ ನೀರಿನ ಕುರುಹುವಿನ ಕುರಿತ ಚರ್ಚೆಗೆ ಇನ್ನಷ್ಟು ಬಿಸಿ ಹೆಚ್ಚಿಸಿದೆ.
ನಿನ್ನೆ ಅಷ್ಟೇ, ಪ್ರಗ್ಯಾನ್ ರೋವರ್ ಗೆ ನಾಲ್ಕು ಮೀಟರ್ ವ್ಯಾಸದ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದ ಬೆನ್ನಲ್ಲೇ ನೀರಿನ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.
ಚಂದಿರನ ಮೇಲೆ ನೀರಿನ ಸೆಲೆ ಇರಬಹುದೆಂಬ ಅಂದಾಜು ಮುಂಚಿನಿಂದಲೂ ಇದೆ. ಅಲ್ಲಿ ಜೀವ ವಿಕಾಸದ ಸಾಧ್ಯತೆ ಇದ್ಯಾ ಎಂಬ ಸಂಶೋಧನೆಗಳೂ ನಡೆಯುತ್ತಿರುವ ಬೆನ್ನಲ್ಲೇ ಚಂದ್ರನ ದಕ್ಷಿಣ ದ್ರುವದ ಮೇಲೆ ಪಾದಾರ್ಪಣೆ ಮಾಡಿರುವ ವಿಕ್ರಂ ಒಂದೊಂದೇ ಕೌತುಕಗಳನ್ನ ತೆರೆದಿಡ್ತಾ ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ, ಚಂದ್ರನಲ್ಲಿ ತಾಪಮಾನ ಬದಲಾವಣೆ ತೀವ್ರ ಗತಿಯಲ್ಲಿ ವೇರಿಯೇಷನ್ ಇದೆ. ಇದಕ್ಕೆ ಎಲ್ಲಾ ದತ್ತಾಂಶ ಕಲೆ ಹಾಕಿ ಸಂಶೋಧಿಸಿದ ಬಳಿಕ ಒಂದು ತೀರ್ಮಾನಕ್ಕೆ ಬರ್ಬಹುದು. ಮೋಸ್ಲೀ ಚಂದ್ರ ಮೇಲೆ ನೀರಿರಬಹುದು. ಇನ್ನೂ ವರೆಗೂ ನೀರಿನ ಅಂಶ ಪತ್ತೆಯಾಗಿಲ್ಲ. ಆದ್ರೆ ಚಂದ್ರನ ಆಳಕ್ಕೆ ಹೋದಂತೆ ತಾಪಮಾನ ಬದಲಾವಣೆ ಆಗ್ತಿರೋದನ್ನ ಗಮನಿಸಿದ್ರೆ ಇರ್ಬಹುದು ಎಂಬ ಅಂದಾಜಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಿರೋದು ನಮ್ಗೆ ಬಹಳ ಸಂತೋಷವಾಗಿದೆ. ಹೆಚ್ಚಿನ ವೈಜ್ಞಾನಿಕ ಮಿಷನ್ ಉದ್ದೇಶಗಳು ಈಡೇರಲಿವೆ. ಎಲ್ಲಾ ವೈಜ್ಞಾನಿಕ ದತ್ತಾಂಶ ಚಂದವಾಗಿ ಕಾಣ್ತಿದೆ. ಮುಂಬರುವ 14 ದಿನಗಳಲ್ಲಿ ಡೇಟಾ ಪಡೆಯುವುದನ್ನ ಮುಂದುವರೆಸುತ್ತೇವೆ. ಆ ಮೂಲಕ ವಿಜ್ಞಾನ ದಲ್ಲಿ ನಾವು ಉತ್ತಮ ಪ್ರಗತಿಯನ್ನ ಸಾಧಿಸಲಿದ್ದೇವೆ ಎಂಬ ನಂಬಿಕೆ ಇದೆ. ಹೀಗಾಗಿ ಮುಂದಿನ 13 ರಿಂದ 14 ದಿನ ನಿರ್ಣಾಯಕ ದಿನವಾಗಿದ್ದು, ಕಾತುರದಿಂದ ಕಾಯ್ತಿದ್ದೇವೆ ಎಂದರು.




