ಬೆಂಗಳೂರು: ಹಗರಣವಾಗಿ ಕೋರ್ಟ್ ಮೆಟ್ಟಿಲೇರಿರುವ ಪಿಎಸ್ ಐ ನೇಮಕಾತಿಯನ್ನ ಕೋರ್ಟ್ ನಿಂದ ತೀರ್ಪು ಬಂದ ಕೂಡಲೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
PSI ನೇಮಕಾತಿ ಕುರಿತು ಬೆಂಗಳೂನಲ್ಲಿ ಮಾತನಾಡಿದ ಅವರು, ನಾಳೆ ಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮ ಅಡ್ವೋಕೇಟ್ ಜನರಲ್ ಹಾಜರಾಗ್ತಾರೆ. ನಾನು ಪ್ರಕರಣ ಇತ್ಯರ್ಥ ಆಗುತ್ತೆ ಅಂತ ಭಾವಿಸಿದ್ದೇನೆ. ಕೋರ್ಟ್ ತೀರ್ಪು ಬಂದ ಕೂಡಲೇ ನಾವು ಮುಂದಿನ ಪ್ರಕ್ರಿಯೆಯನ್ನ ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರಿನಲ್ಲಿ ಶಂಕಿತ ಉಗ್ರನ ಸಹಚರನ ಬಂಧನ ವಿಚಾರದ ಕುರಿತು ಮಾತನಾಡಿದ ಅವರು, ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಶ್ರೀಲಂಕಾದಿಂದ ಬಂದವರು ಅಂತ ಮಾಹಿತಿ ಇದೆ. 4-5 ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಬಂಧನ ಆಗಿರೋ ಎಲ್ಲರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಯುತ್ತಿದೆ.
ಎಲ್ಲಿಂದ ಅವರು ಬಂದಿದ್ದರು, ಯಾರ ಮೂಲಕ ಅವರು ಬಂದಿದ್ದರು ಎಲ್ಲಾ ಮಾಹಿತಿ ಕಲೆ ಹಾಕೋ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ರು.

ಕಾಂಗ್ರೆಸ್ ಸರ್ಕಾರದ 100 ದಿನಗಳಲ್ಲಿ ಸಾಧನೆಗೆ ಬಿಜೆಪಿಯಿಂದ ಜಾರ್ಜ್ ಶೀಟ್ ಬಿಡುಗಡೆ ವಿರುದ್ಧ ವಾಗ್ದಾಳಿ ನಡೆಸಿದ ಪರಮೇಶ್ವರ್, ಬಿಜೆಪಿ ಅವರು ಜಾರ್ಜ್ ಶೀಟ್ ಬಿಡುಗಡೆ ಮಾಡಲಿ. ಅವರು ಮಾಡೋದಕ್ಕೆ ನಾವು ಮಾಡಬೇಡಿ ಅಂತ ಹೇಳೋಕೆ ಆಗುತ್ತಾ? ನಾವು ನಮ್ಮ ಸಾಧನೆಗಳನ್ನು ಬಿಡುಗಡೆ ಮಾಡ್ತೀವಿ. ಅವರು ವೈಫಲ್ಯ ಬಿಡುಗಡೆ ಮಾಡ್ತಾರೆ. ಇಷ್ಟೇ ವ್ಯತ್ಯಾಸ ಅವರಿಗೂ ನಮಗೂ. 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆ ಅಡಿ ಉಚಿತ ಬಸ್ ಪ್ರಯಾಣ ಮಾಡ್ತಿದ್ದಾರೆ ಇದು ಸಾಧನೆ,ಯಶಸ್ವಿ ಸ್ಟೋರಿ ಅಲ್ಲವಾ? ನಾಳೆ 1.20 ಕೋಟಿ ಮನೆ ಯಜಮಾನಿಯರಿಗೆ ಕೊಟ್ಯಾಂತರ ರೂಪಾಯಿ ಹಣ ಖಾತೆಗೆ ಹಾಕ್ತಿದ್ದೇವೆ. ಇದು ಯಶಸ್ವಿ ಸ್ಟೋರಿ ಅಲ್ಲವಾ? ಗೃಹಜ್ಯೋತಿ ಅಡಿ ಜೀರೋ ಬಿಲ್ ಕೊಡುತ್ತಿದ್ದೇವೆ. ಇದು ಸಕ್ಸಸ್ ಸ್ಟೋರಿ ಅಲ್ಲವಾ?10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿಗೆ ಹಣ ಕೊಡ್ತಿದ್ದೇವೆ. ಇದು ಯಶಸ್ವಿನ ಸ್ಟೋರಿ ಅಲ್ಲವಾ? ಬಿಜೆಪಿ ಅವರಿಗೆ ಇದೆಲ್ಲವನ್ನು ನೋಡಿದಾಗ ಹೊಟ್ಟೆ ಉರಿ ಆಗುತ್ತೆ. ಹೀಗಾಗಿ ಅವರು ಸ್ವಾಭಾವಿಕವಾಗಿ ನಮ್ಮ ವೈಫಲ್ಯ ಅಂತಾರೆ. ಜನ ವೈಫಲ್ಯ ಅಂತ ಹೇಳಬೇಕು . ಬಿಜೆಪಿ ಅವರು ಹೇಳಿದ್ರೆ ಯಾರ್ ಕೇಳ್ತಾರೆ. ಜನ ಬಿಜೆಪಿ ಅವರು ಹೇಳಿದ್ದೆಲ್ಲ ಕೇಳಿ 135 ಸೀಟು ನಮಗೆ ಕೊಟ್ರು. ಬಿಜೆಪಿ ಅವರು ಹೇಳೋದ್ರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೊಲ್ಲ ಎಂದು ಕಿಡಿ ಕಾರಿದರು.




