ST SOMASHEKAR JOINING CONGRESS: ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರೋದ್ರಲ್ಲಿ ಡೌಟೇ ಇಲ್ಲ..?

ಬೆಂಗಳೂರು: ಬಿಜೆಪಿ ನಾಯಕರು ನಡೆಸ್ತಿರೋ ಸಭೆಯಲ್ಲಿ ಭಾಗಿ ಆಗ್ತಿಲ್ಲ. ಪ್ರಧಾನಿ ಮೋದಿ ಬಂದ್ರು ಕೂಡ ಭೇಟಿ ಆಗಲ್ಲ. ಮಿತ್ರ ಮಂಡಳಿ ಸಭೆಗೂ ಗೈರು. ಆದ್ರೆ ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿ ಪ್ರಚಾರದಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಕಾಂಗ್ರೆಸ್ ಗೆ ನಾ ಹೋಗಲ್ಲ ಎಂದು ಬಿಜೆಪಿ ಶಾಸಕ ನೇರವಾಗಿ ಅಲ್ಲಗಳೆಯುತ್ತಿದ್ದರೂ ಕಾಂಗ್ರೆಸ್ ಪರ ಒಲವಿನ ಸೂಚನೆ ದಟ್ಟವಾಗಿ ಕಾಣ್ತಿದೆ. ಮೊನ್ನೆ ಅಷ್ಟೇ ಕ್ಷೇತ್ರದಲ್ಲಿ ಸಭೆ ಕರೆದು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಚಾರ ನೀಡಿದ್ದ ಶಾಸಕರು ಇಂದು ಎಲ್ ಇಡಿ ಸ್ಕ್ರೀನ್ ಹಾಕಿಸುವ ಮೂಲಕ ಬಹಿರಂಗವಾಗಿ ಪ್ರಚಾರ ಮಾಡಲು ಸಜ್ಜಾಗಿದ್ದಾರೆ.

ನಾ ಕಾಂಗ್ರೆಸ್ ಗೆ ಹೋಗಲ್ಲ ಹೋಗಲ್ಲ ಎಂದು ಹೇಳುತ್ತಲೇ ಬಿಜೆಪಿ ನಾಯಕರ ತೀವ್ರ ವಿರೋಧದ ಗೃಹಲಕ್ಷ್ಮಿ
ಯೋಜನೆ ಪರ ಎಸ್ ಟಿ ಸೋಮಶೇಖರ್ ಬ್ಯಾಟಿಂಗ್ ಮಾಡ್ತಿದ್ದಾರೆ. ಬ್ಯಾಟಿಂಗ್ ಮಾಡಿದ್ರೆ ಇದು ಇಷ್ಟು ಚರ್ಚೆಗೆ ಒಳಪಡ್ತಿರ್ಲಿಲ್ಲ. ಒಂದೆಜ್ಜೆ ಮುಂದೆ ಹೋಗಿರುವ ಎಸ್ ಟಿ ಸೋಮಶೇಖರ್ ಯಶವಂತಪುರ ವಿಧಾ‌ನ ಸಭಾ ಕ್ಷೇತ್ರದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಅಧಿಕೃತ ಪ್ರಚಾರ ಮಾಡೋದ್ರ ಜೊತೆಗೆ ತಮ್ಮ ಕ್ಷೇತ್ರದ ಜನರಿಗೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ವೀಕ್ಷಣೆಗೆ ಎಲ್ ಇಡಿ ಮತ್ತು ಟಿವಿ ಸ್ಕ್ರೀನ್ ವ್ಯವಸ್ಥೆ ಮಾಡಿದ್ದಾರೆ.!

ಒಂದು ಕಡೆ ಬಿಜೆಪಿ ಈ ಸ್ಕೀಮ್ ಸರಿಯಾಗಿ ಜನರಿಗೆ ಮುಟ್ಟಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ರೆ ಇತ್ತ ಬಿಜೆಪಿ ಶಾಸಕ ಎಸ್ ಟಿ‌ ಸೋಮಶೇಖರ್ ಬಹಿರಂಗವಾಗಿ ಸರ್ಕಾರದ ಪರ ಪ್ರಚಾರ ನಡೆಸ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ‌ ಡಿ.ಕೆ.ಶಿವಕುಮಾರ್ ಹಾಗೂ ಸೋಮಶೇಖರ್ ಇರುವ ಪೋಟೋ ಹಾಕಿರೋ ಕರಪತ್ರ ಹಂಚಿ ಗೃಹ ಲಕ್ಷ್ಮಿ ಯೋಜನೆಯ ಪ್ರಚಾರ ನಡೆಸ್ತಿರೋದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

More News