Jagadish Shettar Taunt: ಟೀಕೆ ಮಾಡೋ ಮುಂಚೆ ನಿಮ್ಮ ಪಕ್ಷದ ಸ್ಥಿತಿ ಏನಂತ ತಿಳಿದುಕೊಳ್ಳಿ: ಜಗದೀಶ್ ಶೆಟ್ಟರ್ ಚಾಟಿ

ಹುಬ್ಬಳ್ಳಿ: ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ವಿರೋಧ ಪಕ್ಷದ ನಾಯಕರಿಲ್ಲ. ಅದನ್ನು ನೋಡೋದು ಬಿಟ್ಟು ಎಲ್ಲದಕ್ಕೂ, ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಟೀಕೆ
ಮಾಡೋದನ್ನ ಬಿಡಿ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಚಾಟಿ ಬೀಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿಯಲ್ಲಿ ಎಲ್ಲ ವ್ಯವಸ್ಥೆ ಹದಗೆಟ್ಟಿದೆ. ಹಿಂದೆ ಚುನಾವಣೆಯಲ್ಲಿ ಸೋತಾಗಲೂ ಈ ರೀತಿಯ ಸ್ಮಶಾನ ಮೌನ ಇದ್ದಿಲ್ಲ. ಸಿಲಿಂಡರ್ ದರ ಇಳಿಕೆ ಇತ್ಯಾದಿ ನೋಡಿದಾಗ ಡಿಸೆಂಬರ್ ನಲ್ಲಿಯೇ ಲೋಕಸಭೆ ಚುನಾವಣೆ ನಡೆಯೋ ಸಾಧ್ಯತೆಗಳಿವೆ. ನಾಲ್ಕೈದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತೆ ಅನ್ನೋ ವಾತಾವರಣ ಇದೆ. ಹೀಗಾಗಿ ಬಿಜೆಪಿ ಅವ್ರಿಗೆ ಹೆದ್ರಿಕೆ ಆರಂಭಗೊಂಡಿದೆ. ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಕುಟುಕಿದರು.

ಗೃಹಲಕ್ಷ್ಮಿ ಉದ್ಘಾಟನೆ ಚುನಾವಣಾ ಗಿಮಿಕ್ ಅನ್ನೋ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್ ಉಚಿತ ಭಾಗ್ಯಗಳನ್ನು ಹೊಸದಾಗಿ ಘೋಷಣೆ ಮಾಡ್ತಿಲ್ಲ
ಚುನಾವಣೆಯಲ್ಲಿ ಘೋಷಿಸಿದಂತೆ ಜಾರಿಗೆ ತರಲಾಗುತ್ತಿದೆ
ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಏನೇನು ಕಾರ್ಯಕ್ರಮ ಮಾಡಿದ್ದಾರೆ ಅಂತ ನೆನಪಿಸಿಕೊಳ್ಳಲಿ. ಹಾಗಾದ್ರೆ ಅವರು ಮಾಡಿದ್ದು ಗಿಮಿಕ್ಕಾ..? ಗಿಮಿಕ್ ಅನ್ನೋದು ಬಿಡಿ, ರಾಜ್ಯ ಸರ್ಕಾರದ ರಚನಾತ್ಮಕ ಕೆಲಸ ವನ್ನ ಸ್ವಾಗತಿಸಿ. ಕಾಂಗ್ರೆಸ್ ಯೋಜನೆಗಳ ಬಗ್ಗೆ ಬಿಜೆಪಿ ಗೆ ಢವ ಢವ ಆರಂಭಗೊಂಡಿದೆ. ಹೀಗಾಗಿ ಪ್ರತಿಯೊಂದನ್ನೂ ಅವ್ರು ಟಿಕೀಸುತ್ತಿದ್ದಾರೆ ಎಂದರು.

ಆರ್ಥಿಕ ದಿವಾಳಿ ಸರಿದೂಗಿಸಲು ಕ್ಲಬ್ ಪಬ್ ಗಳಿಗೆ ರಾತ್ರಿ ಪೂರ್ತಿ ಅನುಮತಿ ಎಂಬ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಬ್, ಬಾರ್ ಎಲ್ಲ ಸರ್ಕಾರಗಳಲ್ಲೂ ಇವೆ. ರಾತ್ರಿ 11 – 12 ಗಂಟೆವರೆಗೂ ಓಪನ್ ಇರುತ್ತೆ
ರಾತ್ರಿಯಿಡಿ ಎಲ್ಲಿ ತೆಗೆದಿದಾರೆ ಅಂತ ತೋರಿಸಲಿ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪಕ್ಷದ ಆಂತರಿಕವಾಗಿ ನಾನೇ ಮಾತಾಡಿದ್ದೇನೆ ಎಂದು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ನಾಯಕನಿಲ್ಲದ ಪಕ್ಷವಾಗಿದೆ ಎಂಬ ಮಾಜಿ ಸಚಿವ ಮುನೇನಕೊಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಧಾರವಾಡವೊಂದೇ ಅಲ್ಲ ಇಡೀ ರಾಜ್ಯದಲ್ಲಿ ಬಿಜೆಪಿ ಲೀಡರ್ ಲೆಸ್ ಪಕ್ಷವಾಗಿದೆ. ಬಹಳಷ್ಟು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುನೇನಕೊಪ್ಪ ಕಾಂಗ್ರೆಸ್ ಗೆ ಬರೋ ಬಗ್ಗೆ ಅವರೇ ತೀರ್ಮಾನಿಸ್ತಾರೆ.
ಡಿಸೆಂಬರ್ ನಲ್ಲಿಯೇ ಚುನಾವಣೆಗೆ ಹೋಗೋದಾದ್ರೆ ಮತ್ತಷ್ಟು ಆಫರ್ ಕೊಡಬಹುದು. ಉಚಿತ ಗಳನ್ನು ವಿರೋಧ ಮಾಡ್ತಿದ್ದ ಮೋದಿ ಅವ್ರು ಉಚಿತ ಭಾಗ್ಯ ಕೊಡಬಹುದು. ಉಚಿತ ಯೋಜನಗಳ ಬಗ್ಗೆ ಮೋದಿ ಬಹಳ ತಲೆಕೆಡಿಸಿಕೊಳ್ತಿದ್ದಾರೆ. ಧಾರವಾಡ ಸೇರಿ 15 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

More News