Kumaraswamy Hospitalised After Mild Stroke: ಹೆಚ್ ಡಿ ಕುಮಾರಸ್ವಾಮಿಗೆ ಲಘು ಸ್ಟ್ರೋಕ್: ಇನ್ನೆರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು ಹಿನ್ನಲೆ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದು, ನಿರಂತರವಾಗಿ ಚಿಕಿತ್ಸೆ ನೀಡಲಾಗ್ತಿದೆ.

ಈ ಕುರಿತು ಮಾಹಿತಿ ನೀಡಿದ ವೈದ್ಯ ಡಾ.ಸತೀಶ್ ಚಂದ್ರ, ಕುಮಾರಸ್ವಾಮಿ ಅವರಿಗೆ ಮಿದುಳಿನ ಎಡಭಾಗದಲ್ಲಿ ತೊಂದರೆ ಆಗಿದೆ. ರಕ್ತ ಸಂಚಾರ ಕಡಿಮೆ ಆದ ಕಾರಣ ಅವ್ರ ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು. ಲಘುವಾದ ಸ್ಟ್ರೋಕ್ ಆಗಿದೆ ಅಷ್ಟೇ. ಈಗ ಎಲ್ಲವೂ ಸರಿಯಾಗಿದೆ. ಚಿಕಿತ್ಸೆ ನೀಡಲಾಗಿದೆ. ಚೆನ್ನಾಗಿ ಮಾತು ಕೂಡ ಆಡ್ತಾರೆ. ಹೃದಯ ಬಡಿತ, ರಕ್ತದೊತ್ತಡ ಎಲ್ಲವೂ ನಾರ್ಮಲ್ ಇದೆ. ಆರೋಗ್ಯವೂ ಚೇತರಿಕೆಯಾಗಿದೆ. ಅವರು ತಮ್ಮ ಕೆಲಸವನ್ನು ತಾವೇ ಮಾಡಬಲ್ಲರು. ಅಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ರೀತಿ ಕೇಸ್‌ಗಳಲ್ಲಿ ಸ್ಟ್ರೋಕ್ ಆಗಿ ಮೂರು ಗಂಟೆ ಒಳಗೆ ಆಸ್ಪತ್ರೆಗೆ ಬಂದರೆ ಪೂರ್ಣವಾಗಿ ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು.

ಇನ್ನು ಮಾಜಿ ಮುಖ್ಯಮಂತ್ರಿಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪತ್ನಿ ಅನಿತಾ ಕುಮಾರಸ್ವಾಮಿ, ಬೆಳಗ್ಗಿನ ಜಾವ ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾಗಿತ್ತು.
ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಆಗಿದ್ದಾರೆ. ಯಾವುದೆ ಉಹಾ ಪೋಹದ ಸುದ್ದಿಯನ್ನು ಯಾರು ನಂಬಬೇಡಿ. ಯಾವುದೇ ತೊಂದರೆ ಇಲ್ಲ, ರಾಜ್ಯದ ಜನ ಯಾವುದೇ ಉಹಾ ಪೋಹದ ಸುದ್ದಿಗೆ ತಲೆಕೆಡಿಸಿಕೊಳ್ಳಬೇಡಿ. ವೈದ್ಯರು ನಾಳೆಯೆ ಡಿಸ್ಚಾರ್ಜ್ ಮಾಡುವುದಾಗಿ ತಿಳಿಸಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಮನೆಗೆ ಬಂದರೆ ರೆಸ್ಟ್ ಮಾಡುವುದಿಲ್ಲ. ಹಾಗಾಗಿ ಇನ್ನು ೨ ದಿನ ಆಸ್ಪತ್ರೆಯಲ್ಲೇ ಇರುತ್ತಾರೆ ಎಂದು ತಿಳಿಸಿದರು.

More News