DIRECTOR KISSING TO ACTRESS: ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಸಹೋದರಿಗೆ ಮುತ್ತಿಟ್ಟ ತೆಲುಗು ನಿರ್ದೇಶಕ: ವಿಡಿಯೋ ಸಕತ್ ವೈರಲ್

ತೆಲುಗು ನಿರ್ದೇಶಕರೊಬ್ಬರು ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಸಹೋದರಿ ಮನ್ನಾರ ಚೋಪ್ರಾ ಅವರ ಕೆನ್ನೆಗೆ ಪತ್ರಿಕಾಗೋಷ್ಠಿಯಲ್ಲಿಯೇ ಮುತ್ತಿಟ್ಟಿದ್ದಾರೆ. ನಿರ್ದೇಶಕರು ಮುತ್ತಿಟ್ಟ ವಿಡಿಯೋ ಇದೀಗ ಸಕತ್ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.

ತಿರಗಬ್ಯಾಡರ ಸಾಮಿ ತೆಲುಗು ಚಲನಚಿತ್ರವನ್ನು ಎ ಎಸ್ ರವಿ ಅವರು ನಿರ್ದೇಶಿಸಿದ್ದರು. ಇದರಲ್ಲಿ ನಟ ರಾಜ್ ತರುಣ್ ನಾಯಕನಾಗಿ ನಟಿಸಿದರೆ, ಮನ್ನಾರ ಚೋಪ್ರಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ. ಅದಕ್ಕೂ ಮುನ್ನಾ ನಡೆದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಈ ಚುಂಬನದ ಘಟನೆ ನಡೆದಿದ್ದು, ನೆರೆದಿದ್ದವರು ಗಾಭರಿಯಾಗುವಂತಾಗಿದೆ.

ಚಿತ್ರದ ಟೀಸರ್ ರಿಲೀಸ್ ಆದ ಬಳಿಕ ಮನ್ನಾರ ಚೋಪ್ರಾ ಕ್ಯಾಮರಾಗಳಿಗೆ ನಾನಾ ರೀತಿಯ ಫೋಸ್ ನೀಡುತ್ತಿದ್ದರು. ಇದನ್ನು ಕ್ಯಾಮರಾಮೆನ್ ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರು. ಏಕಾಏಕಿಯಾಗಿ ಮನ್ನಾರ ಬಳಿ ಬಂದ ನಿರ್ದೇಶಕ ರವಿ ಅವರು ಮನ್ನಾರ ಅವರ ಜತೆ ಕೆಲವು ಫೋಟೋಗಳಿಗೆ ಫೋಸ್ ನೀಡಿದರು. ನಂತರ ಅವರು ಅವರ ಕೆನ್ನೆಗೆ ಮುತ್ತಿಟ್ಟರು. ಆತಂಕಕ್ಕೆ ಒಳಗಾದ ಮನ್ನಾರ ಒಂದು ಕ್ಷಣ ನಕ್ಕು ಸುಮ್ಮನಾದರು.

ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಆಗುತ್ತಿದ್ದಂತೆಯೇ ನಿರ್ದೇಶಕರ ನಡೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ನಿರ್ದೇಶಕರನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು. ಸಾರ್ವಜನಿಕ ಸ್ಥಳದಲ್ಲಿ ನಿರ್ದೇಶಕರಿಗೆ ಇವೆಲ್ಲಾವೂ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

#PRIYANKACHOPRA #SISITER #MANNARACHOPRA #ASRAVI #DIRECTOR #ACTRESS #KISS

More News